September 2025 Calendar Kannada ಸೆಪ್ಟೆಂಬರ್ 2025 ಕನ್ನಡ ಕ್ಯಾಲೆಂಡರ್ panchanga september month calendar kannada holidays
ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 30 ದಿನಗಳಿದ್ದು ಹಾಗೆ 4 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಅನಂತಪದ್ಮನಾಭ ವ್ರತ ಹಾಗೆ ಈದ್ ಮಿಲಾದ್ ಹಬ್ಬವನ್ನು ಸಹ ನೋಡಬಹುದಾಗಿದೆ.

2025 ಸೆಪ್ಟೆಂಬರ್ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಈ ತಿಂಗಳಿನಲ್ಲಿ ಪಿತೃಪಕ್ಷ ಪ್ರಾರಂಭವಾಗಲಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.
ಸೆಪ್ಟೆಂಬರ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ
ನಮ್ಮ ಈ ಕನ್ನಡ ಕ್ಯಾಲೆಂಡರ್ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ
ವಾರದ ಹೆಸರು | ರಾಹು ಕಾಲ | ಗುಳಿ ಕಾಲ | ಯಮಗಂಡ ಕಾಲ |
---|---|---|---|
ಭಾನುವಾರ | 04.30 – 06.00 | 12.00 – 01.30 | 03.00 – 04.30 |
ಸೋಮವಾರ | 07.30 – 09.00 | 10.30 – 12.00 | 10.30 – 03.00 |
ಮಂಗಳವಾರ | 03.00 – 04.30 | 09.00 – 10.30 | 12.00 – 01.30 |
ಬುಧವಾರ | 12.00 – 01.30 | 07.30 – 09.00 | 10.30 – 12.00 |
ಗುರುವಾರ | 01.30 – 03.00 | 06.00 – 07.30 | 09.00 – 10.30 |
ಶುಕ್ರವಾರ | 10.30 – 12.00 | 03.00 – 04.30 | 07.30 – 09.00 |
ಶನಿವಾರ | 09.00 – 10.30 | 01.30 – 03.00 | 06.00 – 07.30 |
ಶುಭ ಕಾರ್ಯಗಳಿಗೆ ಉತ್ತಮ ದಿನಗಳು
ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಂಖಾಂತರ ತಿಳಿಯಬಹುದಾಗಿದೆ
ತಿಂಗಳು | ಶುಭ ಮುಹೂರ್ತದ ಹೆಸರು | ದಿನಾಂಕ |
---|---|---|
ಸೆಪ್ಟೆಂಬರ್ | ವಿವಾಹ ಮುಹೂರ್ತಗಳು | ಇರುವುದಿಲ್ಲ |
ಸೆಪ್ಟೆಂಬರ್ | ವಾಸ್ತು ಶಾಂತಿ ಮುಹೂರ್ತಗಳು | ಇರುವುದಿಲ್ಲ |
ಸೆಪ್ಟೆಂಬರ್ | ಉಪನಯನ ಮೂಹೂರ್ತ | ಇರುವುದಿಲ್ಲ |
ಸೆಪ್ಟೆಂಬರ್ | ಶುಭ ದಿನ | 2, 4, 5, 6, 9, 11, 14, 17, 18, 22, 23, 27, 30 |
ಸೆಪ್ಟೆಂಬರ್ | ಮಧ್ಯಮ ದಿನ | 1, 10 |
ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ
ದಿನಾಂಕ | ವಾರ | ಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು |
---|---|---|
6/9/2025 7/9/2025 | ಶನಿವಾರ ಭಾನುವಾರ | ಅನಂತ ಹುಣ್ಣಿಮೆ |
21/9/2025 | ಬುಧವಾರ | ಮಹಾಲಯ ಅಮವಾಸ್ಯೆ |
ವಿಶೇಷ ದಿನಗಳು
ದಿನಾಂಕ | ವಾರ | ವಿಶೇಷ ದಿನ |
---|---|---|
5/9/2025 | ಶುಕ್ರವಾರ | ಈದ್ ಮಿಲಾದ್, ಶಿಕ್ಷಕರ ದಿನಾಚರಣೆ |
6/9/2025 | ಶನಿವಾರ | ಅನಂತ ಚತುರ್ದಶಿ |
10/9/2025 | ಬುಧವಾರ | ಸಂಕಷ್ಟ ಚತುರ್ಥಿ |
17/9/2025 | ಬುಧವಾರ | ವಿಶ್ವಕರ್ಮ ದಿನ |
22/9/2025 | ಸೋಮವಾರ | ಘಟಸ್ಥಾಪನೆ, ನವರಾತ್ರಿ ಆರಂಭ |
ಸರ್ಕಾರಿ ರಜಾ ದಿನಗಳು
ದಿನಾಂಕ | ವಾರ | ವಿಷಯ |
---|---|---|
5/9/2025 | ಶುಕ್ರವಾರ | ಈದ್ ಮಿಲಾದ್, ಶಿಕ್ಷಕರ ದಿನಾಚರಣೆ |
ಬ್ಯಾಂಕ್ ರಜಾ ದಿನಗಳು
ದಿನಾಂಕ | ವಾರ | ರಜೆಯ ಕಾರಣ |
---|---|---|
13/9/2025 | ಶನಿವಾರ | 2 ನೇ ಶನಿವಾರ |
27/9/2025 | ಶನಿವಾರ | 4 ನೇ ಶನಿವಾರ |
ಈ ತಿಂಗಳ ರಾಶಿ ಫಲ
1. ಮೇಷ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಶಿಕ್ಷಣಕ್ಕಿಂತ ಖಾಲಿ ನಿಷ್ಕರಣವಾದ, ಕಲಾ, ಕ್ರೀಡೆ ಮುಂತಾದವುಗಳತ್ತ ಹೆಚ್ಚು ಲಕ್ಷ್ಯ ಇಡಿ. ಕೌಟುಂಬಿಕ ಖರ್ಚು ಹೆಚ್ಚಾಗುವುದು. ಗುಪ್ತ ಒಳಸಂಚಿನ ತೊಂದರೆ ಆಗುತ್ತದೆ. ಉತ್ತರಾರ್ಧದಲ್ಲಿ ಕೆಲಸದಲ್ಲಿ ಯಶಸ್ಸು ಪ್ರಾಪ್ತಿ.
2. ವೃಷಭ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾಪಂಚಿಕ ಸಮಸ್ಯೆಗಳಿರಬಹುದು. ಕೋಪವನ್ನು ತಡೆದಿಟ್ಟುಕೊಳ್ಳಿರಿ. ಉತ್ತರಾರ್ಧದಲ್ಲಿ ಉತ್ತಮ ಸಂಬಳದ ನೌಕರಿ ದೊರೆಯುತ್ತದೆ. ಆರೋಗ್ಯ ಸುಧಾರಿಸುತ್ತದೆ. ಕಂಕಣ ಬಲ ಕೂಡಿ ಬರುತ್ತದೆ. ರಾಜಕಾರಣದಲ್ಲಿ ಯಶಸ್ಸು ಸಿಗುತ್ತದೆ.
3. ವಿಥುನ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಸಮಾಜಮುಖಿ ಆಗಿರುವಿರಿ. ಪ್ರಗತಿಯ ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಉತ್ತರಾರ್ಧದಲ್ಲಿ ತಂದೆ – ತಾಯಿಯರ ಕಾಳಜಿ ಮಾಡುತ್ತೀರಿ. ವಿದೇಶ ಪ್ರವಾಸ, ಪ್ರವಾಸ ಸಾಧ್ಯತೆ.
4. ಕರ್ಕ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಕುಟುಂಬದಲ್ಲಿ ಸಮಸ್ಯೆಯನ್ನು ಎದುರಿಸುವಿರಿ. ಆರ್ಥಿಕ ಪ್ರಾಪ್ತಿ ಸಾಧಾರಣ, ಉತ್ತರಾರ್ಧದಲ್ಲಿ ಎಲ್ಲಾ ಕೆಲಸಗಳು ಯಶಸ್ವಿ ಕಾಣುವವು. ವಿದೇಶ ಪ್ರವಾಸ ಸಾಧ್ಯತೆ. ಭಾವನಾತ್ಮಕ ಆವೇಗ ನಿಯಂತ್ರಿಸಿರಿ. ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡುವಿರಿ.
5. ಸಿಂಹ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಮಾನಸಿಕ ಸಂತುಲನ ಇರಲಿ, ಭಾವಾವೇಗ, ಒಮ್ಮೆಲೆ ಸಿಟ್ಟಿಗೆ ಬರುವುದನ್ನು ಬಿಟ್ಟುಬಿಡಿ. ಆರ್ಥಿಕ ಪ್ರಾಪ್ತಿ ಸಾಧಾರಣ, ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡುವಿರಿ. ನಿಮ್ಮಿಂದ ಸಹೋದರರ ಹೆಸರು ಪ್ರಸಿದ್ದಿಗೆ ಬರುವುದು, ಶಿಕ್ಷಣದಲ್ಲಿ ಮುಂಚೂಣಿಗೆ ಬರುವಿರಿ.
6. ಕನ್ಯಾ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಕಾನೂನು ಬಾಬತ್ತುಗಳನ್ನು ಸಂಭಾಳಿಸಿರಿ. ಖರ್ಚಿನ ಪ್ರಮಾಣ ಹೆಚ್ಚಾಗುವುದು. ಉತ್ತರಾರ್ಧದಲ್ಲಿ ಪಿತ್ತದ ತೊಂದರೆ, ಹೊಸ ಕಲ್ಪನೆಗಳು ಹೊಳೆಯುವವು. ಪ್ರತಿಕೂಲ ಪ್ರಸಂಗದಿಂದ ಲಾಭ ಸಂಭವ. ಕಿವಿ ನೋವು ಬರುವುದು.
7. ತುಲಾ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಅಪೇಕ್ಷೆಯಂತೆ ಆರ್ಥಿಕ ಲಾಭ. ಮಿತ್ರರಿಗಾಗಿ ಖರ್ಚು ಆಗುವುದು. ಚಿನ್ನಾಭರಣ ಖರೀದಿ ಮಾಡುವುರಿ. ಉತ್ತರಾರ್ಧದಲ್ಲಿ ಉದ್ಯೋಗದ ಸ್ಪರ್ಧೆಯ ಕುರಿತು ಮನಸ್ಸಿನ ಮೇಲೆ ಒತ್ತಡ ಆಗುವುದು. ಭಾವನಾವೇಗ ಮತ್ತು ಕೋಪವನ್ನು ಹಿಡಿದಿಡಿರಿ.
8. ವೃಶ್ಚಿಕ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಅಧಿಕಾರ ವ್ಯವಸ್ಥಿತವಾಗಿ ನಡೆಯುವುದಿಲ್ಲ, ವಿವೇಕ ಬುದ್ದಿ ಜಾಗೃತವಾಗಿಡಿರಿ. ಉತ್ತರಾರ್ಧದಲ್ಲಿ ಚಾಣಾಕ್ಷತದಿಂದ ದೊಡ್ಡದಾದ ಆರ್ಥಿಕ ಲಾಭ ಸಂಭವ. ಖರ್ಚು ಮಾಡುವ ಸ್ವಭಾವ ಬೆಳೆಯುತ್ತದೆ. ಭಾವನಾತ್ಮಕ ಸವಾಲುಗಳಿಗೆ ಎದುರಾಗಬೇಕಾಗುತ್ತದೆ.
9. ಧನು ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ಭಾಗಿ ಕೆಲಸಗಳಿಗೆ ದೈವದ ಬೆಂಬಲ ಸಿಗುತ್ತದೆ. ಹಣ, ವಿದ್ಯೆ, ಪ್ರಾಪರ್ಟಿಯ ಲಾಭ ಸಂಭವ, ವಿಳಂಬ. ತೊಂದರೆ, ಅಡಚಣೆ ಅನುಭವಿಸುವಿರಿ. ಕಾನೂನು ವಿಷಯವನ್ನು ನಿಭಾಯಿಸಿರಿ.
10. ಮಕರ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉದ್ಯೋಗದಲ್ಲಿ ಮಂದಿ ಇರುವುದು, ದೈಹಿಕ ಕಾಯಿಲೆ ಹಾಗೂ ಕಿವಿನೋವು ಕಾಣುವುದು. ಉತ್ತರಾರ್ಧದಲ್ಲಿ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡುವಿರಿ. ಭಾವನಾವೇಗವನ್ನು ನಿಯಂತ್ರಿಸಿರಿ.
11. ಕುಂಭ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಭಾವನಾತ್ಮಕ ವಾದದಲ್ಲಿ ಅತ್ಯಂತಿಕ ನಿರ್ಣಯ ತೆಗೆದುಕೊಳ್ಳಬೇಡಿರಿ. ಉತ್ತರಾರ್ಧದಲ್ಲಿ ಮಂದಿ ಕಾಣುವಿರಿ. ಮಾನ ಅವಮಾನಗಳ ಪ್ರಸಂಗಗಳು ಘಟಿಸಬಹುದು. ಕುಟುಂಬದಲ್ಲಿ ಸಮಸ್ಯೆಗಳು ಉದ್ಭವಿಸಬಹುದು.
12. ಮೀನ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ವಾರ್ಧದಲ್ಲಿ ಕೆಲಸಗಳಾಗುತ್ತದೆ, ಆದರೆ ಸ್ಪರ್ಧಕರ ಊಹೆ ಅರ್ಥ ಮಾಡಿಕೊಳ್ಳಿರಿ. ಅಹಂಕಾರದಿಂದ ಭಾವನಾತ್ಮಕ ಒಣ ಜಗಳದಲ್ಲಿ ಸಿಲುಕಬಹುದು. ಮಾನಸಿಕ ಸಂತುಲನವನ್ನು ಕಾಯ್ದುಕೊಳ್ಳಿರಿ. ಅಂತಿಮ ಕೆಲಸದಲ್ಲಿ ಯಶಸ್ಸು ಪ್ರಾಪ್ತಿ ಆಗುತ್ತದೆ.
ಮಳೆ ಭವಿಷ್ಯ
ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಖಾಂತರ ನೀವು 2025 ರ ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆ ಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ
1. ಉತ್ತರಾ
ಈ ಮಳೆಯು ದಿನಾಂಕ 14/9/2025 ರಂದು ಬೆಳಗ್ಗೆ 8.19 ಕ್ಕೆ ಸರಿಯಾಗಿ ಉತ್ತರಾ ನಕ್ಷತ್ರದಲ್ಲಿ ನರಿ ವಾಹನದಲ್ಲಿ ಆರಂಭವಾಗುತ್ತದೆ. ಈ ನಕ್ಷತ್ರದಲ್ಲಿ ಎಲ್ಲೆಡೆ ಉತ್ತಮ ಮಳೆ. ವಿಶೇಷವಾಗಿ ಮಧ್ಯ ಕರ್ನಾಟಕ, ಪೂರ್ವ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಅತ್ಯುತ್ತಮ ಮಳೆಯಾಗುವ ಸಂಭವವಿದೆ. ಉತ್ತರ ಮತ್ತು ಪಶ್ಚಿಮ ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಮಳೆಯ ಪ್ರಮಾಣ ಕಡಿಮೆ. 15 ರಿಂದ 17 ಮತ್ತು 21 ರಿಂದ 25 ರಂದು ಮಳೆಯ ಸಂಭವ ಹೆಚ್ಚಿದೆ.
2. ಹಸ್ತ
ಈ ಮಳೆಯು ದಿನಾಂಕ 27/9/2025 ರಂದು ರಾತ್ರಿ 9.35 ಕ್ಕೆ ಸರಿಯಾಗಿ ಹಸ್ತ ನಕ್ಷತ್ರದಲ್ಲಿ ನವಿಲು ವಾಹನದಲ್ಲಿ ಆರಂಭವಾಗುತ್ತದೆ. ಹಾಗೆ ಈ ಮಳೆಯು ಉತ್ತರ ಮತ್ತು ಪೂರ್ವ ಕರ್ನಾಟಕದಲ್ಲಿ ಅನಿಯಮಿತ ಮಳೆಯ ಸಾಧ್ಯತೆ. ಅಲ್ಪ ಸ್ವಲ್ಪ ಕಾಲದಲ್ಲಿ ಅಲ್ಪ ಸ್ವಲ್ಪ ಮಳೆಯಾಗುವ ಸಂಭವವಿದೆ. ಮಧ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಮಧ್ಯಮ ಸ್ವರೂಪದ ಮಳೆ ಬೀಳುವುದು. 29 – 30 ಮತ್ತು 3 – 8 ಅಕ್ಟೋಬರ್ ನಡುವೆ ಉತ್ತಮ ಮಳೆಯ ಸಂಭವ.
ಗ್ರಹಣ ವಿಚಾರಗಳು
ನಮ್ಮ ಈ ಕನ್ನಡ ಕ್ಯಾಲೆಂಡರ್ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.
ಗ್ರಹಣದ ಹೆಸರು | ದಿನಾಂಕ | ವಾರ | ಗ್ರಹಣ ಆರಂಭ ಕಾಲ | ಗ್ರಹಣ ಮೋಕ್ಷ ಕಾಲ | ಸೂಚನೆ |
---|---|---|---|---|---|
ಖಗ್ರಾಸ ಚಂದ್ರ ಗ್ರಹಣ | 7-09-2025 | ಭಾನುವಾರ | ರಾತ್ರಿ 09-57 pm | ಉ.ರಾತ್ರಿ – 1-27 pm | ಈ ಗ್ರಹಣವು ಸಂಪೂರ್ಣ ಭಾರತದಲ್ಲಿ ಕಾಣುತ್ತದೆ |