July 2026 Calendar Kannada ಜುಲೈ 2026 ಕನ್ನಡ ಕ್ಯಾಲೆಂಡರ್‌, kannada panchanga july month calendar holidays in July karnataka

ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2026 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಜುಲೈ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಹಾಗೆ 4 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ಮೊಹರಾಂ 6 ನೇ ದಿನವನ್ನು ನೋಡಬಹುದಾಗಿದೆ.

2026 ಜುಲೈ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರು ನಿಮ್ಮ ಉತ್ತಮ ಭವಿಷ್ಯವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಜುಲೈ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ.

ವಾರದ ಹೆಸರುರಾಹು ಕಾಲಗುಳಿಕಕಾಲಯಮಗಂಡಕಾಲ
ಭಾನುವಾರಸಂಜೆ 4:30 – 6:00ಮಧ್ಯಾಹ್ನ 3:00 – 4:30ಮಧ್ಯಾಹ್ನ 12:00 – 1:30
ಸೋಮವಾರಬೆಳಗ್ಗೆ 7:30 – 9:00ಮಧ್ಯಾಹ್ನ 1:30 – 3:00ಬೆಳಗ್ಗೆ 10:30 – 12:00
ಮಂಗಳವಾರಮಧ್ಯಾಹ್ನ 3:00 – 4:30ಮಧ್ಯಾಹ್ನ 12:00 – 1:30ಬೆಳಗ್ಗೆ 9:00 – 10:30
ಬುಧವಾರಮಧ್ಯಾಹ್ನ 12:00 – 1:30ಬೆಳಗ್ಗೆ 10:30 – 12:00ಬೆಳಗ್ಗೆ 7:30 – 9:00
ಗುರುವಾರಮಧ್ಯಾಹ್ನ 1:30 – 3:00ಬೆಳಗ್ಗೆ 9:00 – 10:30ಬೆಳಗ್ಗೆ 6:00 – 7:30
ಶುಕ್ರವಾರಬೆಳಗ್ಗೆ 10:30 – 12:00ಬೆಳಗ್ಗೆ 7:30 – 9:00ಮಧ್ಯಾಹ್ನ 3:00 – 4:30
ಶನಿವಾರಬೆಳಗ್ಗೆ 9:00 – 10:30ಬೆಳಗ್ಗೆ 6:00 – 7:30ಮಧ್ಯಾಹ್ನ 1:30 – 3:00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಜುಲೈವಿವಾಹ ಮುಹೂರ್ತಗಳುಇರುವುದಿಲ್ಲ
ಜುಲೈವಾಸ್ತು ಶಾಂತಿ ಮುಹೂರ್ತಗಳು30, 31
ಜುಲೈಉಪನಯನ ಮೂಹೂರ್ತಇರುವುದಿಲ್ಲ
ಜುಲೈಶುಭ ದಿನ 3, 4, 5, 7, 12, 14, 15, 16, 18, 19, 21, 25, 27, 29, 30, 31
ಜುಲೈಮಧ್ಯಮ ದಿನ1, 2, 11, 28

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
29/7/2026ಬುಧವಾರಕಡ್ಲಿಗಡಬ ಹುಣ್ಣಿಮೆ

ವಿಶೇಷ ದಿನಗಳು

ದಿನಾಂಕವಾರವಿಶೇಷ ದಿನ
3/7/2026ಶುಕ್ರವಾರಸಂಕಷ್ಟ ಚತುರ್ಥಿ
14/7/2026ಮಂಗಳವಾರಮಣ್ಣೆತ್ತಿನ ಅಮಾವಾಸ್ಯೆ
25/7/2026ಶನಿವಾರಆಷಾಢ ಏಕಾದಶಿ
29/7/2026ಬುಧವಾರಗುರುಪೂರ್ಣಿಮ

ಸರ್ಕಾರಿ ರಜಾ ದಿನಗಳು

ಜುಲೈ ತಿಂಗಳಲ್ಲಿ ಯಾವುದೇ ಸರ್ಕಾರಿ ರಜೆಗಳು ಇರುವುದಿಲ್ಲ.

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
11/7/2026ಶನಿವಾರ2ನೇ ಶನಿವಾರ
25/7/2026ಶನಿವಾರ4ನೇ ಶನಿವಾರ

ಈ ತಿಂಗಳ ರಾಶಿ ಫಲ

1. ಮೇಷ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಪ್ರಾಪಂಚಿಕ ಕಾಳಜಿ ಇರುವುದು. ಸಾಹಿತ್ಯ, ಲೇಖನಗಳಲ್ಲಿ ಪ್ರಗತಿ ಸಾಧ್ಯ. ಪ್ರಗತಿಯ ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ಸಹೋದರರ ಜವಬ್ದಾರಿ ಹೊರುವಿರಿ. ಕಂಕಣ ಬಲ ಕೂಡಿ ಬರುವುದು. ಕೆಲಸದಲ್ಲಿ ಯಶಸ್ಸು ಸಿಗುವುದು.

2. ವೃಷಭ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಮಹಾತ್ವಾಕಾಂಕ್ಷಿ ಮತ್ತು ಚಂಚಲ ಆಗುವಿರಿ. ಆರ್ಥಿಕ ಪ್ರಾಪ್ತಿ ಸಾಧಾರಣ, ಆದರೆ ಉತ್ತಮವಾಗಿರುತ್ತದೆ. ಕೆಲಸಗಳು ಯಶಸ್ವಿಯಾಗುವವು. ಹೊಟ್ಟೆಯ ತೊಂದರೆ ಉಂಟಾಗುತ್ತದೆ. ಕಾಯಂ ನೌಕರಿ ಸಿಗುತ್ತದೆ. ಸಹೋದರರಿಗೆ ತೊಂದರೆಯಿದೆ.

3. ವಿಥುನ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ವಿದೇಶಿ ಪ್ರವಾಸ ಸಾಧ್ಯತೆ. ಪ್ರವಾಸಗಳು ಜರುಗುವವು. ಆರ್ಥಿಕ ಪ್ರಾಪ್ತಿ ಉತ್ತಮ. ಚಿನ್ನಾಭರಣಗಳ ಪ್ರಾಪ್ತಿ. ಸಾಮಾಜಿಕ ಕಾರ್ಯದಿಂದ ಲಾಭ ಸಂಭವ. ತಟ್ಟನೆ ಸಿಟ್ಟು ಬರುವುದು. ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣವಾಗಿರುವುದು.

4. ಕರ್ಕ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಉದ್ಯೋಗದಲ್ಲಿ ಸ್ಪರ್ಧೆಯಿರುವುದು. ಪಿತ್ತದ ತೊಂದರೆ, ಪ್ರಕೃತಿ ಸ್ವಲ್ಪ ಆಚೆ ಈಚೆ ಆಗುತ್ತದೆ. ಕುಟುಂಬದಲ್ಲಿ ಮನಬದಂತೆ ವರ್ತಿಸುವಿರಿ. ಖರ್ಚು ಹೆಚ್ಚಾಗುತ್ತದೆ, ಆದರೆ ಆರ್ಥಿಕ ಪ್ರಾಪ್ತಿ ಉತ್ತಮವಾಗಿರುತ್ತದೆ. ವಿದೇಶ ಯಾತ್ರೆಯ ಅವಕಾಶ ಒದಗಿ ಬರುತ್ತದೆ.

5. ಸಿಂಹ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಸಮಾಜಮುಖಿ ಆಗಿರುವಿರಿ. ಮಿತ್ರರು ಮತ್ತು ಸಂಬಂಧಿಕರಿಗಾಗಿ ವೆಚ್ಚ ಮಾಡುವಿರಿ. ಉತ್ತರಾರ್ಧದಲ್ಲಿ ಉದ್ಯೋಗದಲ್ಲಿ ಸ್ಪರ್ಧೆಯನ್ನು ಕಾಣಿವಿರಿ. ಖರ್ಚು ಹೆಚ್ಚಬಹುದು. ಬಕ್ಷೀಸುಗಳು ಲಭಿಸುವುದು. ಭಾವನಾವೇಗ ತಡೆಯಿರಿ.

6. ಕನ್ಯಾ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಅಧಿಕಾರ ಇರುತ್ತದೆ ಆದರೆ ವ್ಯವಸ್ಥಿತವಾಗಿ ನಡೆಯುವುದಿಲ್ಲ. ಅಪೇಕ್ಷೆಯಂತೆ ಪ್ರಾಪರ್ಟಿಯ ಸಕಲ ಲಾಭ ದೊರೆಯುವುದು. ಭಾವನಾತ್ಮಕ ತೊಡಕುಗಳು ನಿರ್ಮಾಣ ಆಗುವವು. ಗುಣಮಟ್ಟ ಹೆಚ್ಚಿಸಿರಿ. ವಿದೇಶಿ ಪ್ರವಾಸ ಸಾಧ್ಯತೆ.

7. ತುಲಾ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಭಾಗವಹಿಸುವಿಕೆ ಹೆಚ್ಚುವುದು. ಗುರುಕೃಪೆ ಲಭಿಸುವುದು. ನೌಕರಿಯಲ್ಲಿ ಬಡ್ತಿಯ ಯೋಗ ಬರುವುದು. ಫುಡ್‌ ಪಾಯಜನಿಂಗ್‌ ತೊಂದರೆ ಸಂಭವ. ಪ್ರಾಪರ್ಟಿಯ ಕೆಲಸಗಳು ಆಗುವವು. ವಿದೇಶ ಪ್ರವಾಸ ಸಾಧ್ಯ.

8. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಶರೀರ ಸಂಬಂಧಿ ವ್ಯಾಧಿಯ ತೊಂದರೆ ಸಂಭವ, ಪ್ರಯತ್ನ ಸಾಲದಿರಬಹುದು. ಉದ್ಯೋಗದಲ್ಲಿ ಸ್ಪರ್ಧೆಯು ಅರಿವಿಗೆ ಬರುವುದು. ಉತ್ತರಾರ್ಧದಲ್ಲಿ ತಮ್ಮ ಕ್ಷೇತ್ರದಲ್ಲಿ ಪ್ರಗತಿ ಆಗುವುದು, ಭಾವನಾತ್ಮಕ ಕಹಿತನ ಅರಿವಿಗೆ ಬರುವುದು.

9. ಧನು ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಅಹಮ್ಮಿಕೆ, ನಾಟಕೀಯತೆಯಿಂದ ತೊಂದರೆ ಉಂಟಾಗಬಹುದು. ಯಾತನೆ ತರುವುದು. ಬಹುಮಾನಗಳು ಲಭಿಸುತ್ತದೆ. ಕಂಕಣ ಬಲ ಕೂಡಿ ಬರುವುದು. ವಿವೇಕ ಬುದ್ಧಿಯನ್ನು ಜಾಗೃತವಾಗಿಡಿ. ವಿಳಂಬ, ಅಡಚಣೆ, ತೊಂದರೆ ಅನುಭವಿಸುವಿರಿ.

10. ಮಕರ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಪ್ರತಿಕೂಲ ಪ್ರಸಂಗದಿಂದ ಲಾಭ, ಕೌಟುಂಬಿಕ ಖರ್ಚು ಹೆಚ್ಚಾಗುತ್ತದೆ. ಸಂಬಂಧಿಕರು, ಬಂಧುಗಳ ಸಂಗಡ ಆಗುವ ಕಲಹ ತಪ್ಪಿಸಿರಿ. ಆಧ್ಯಾತ್ಮಿಕ ಪ್ರಗತಿ ಆಗುವುದು, ಆದರೆ ಭಾವನಾತ್ಮಕ ಕಹಿತನ ಅರಿವಿಗೆ ಬರುವುದು. ಕೃಷಿ ಕೆಲಸಗಳು ಆಗುತ್ತವೆ.

11. ಕುಂಭ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಕಂಕಣ ಬಲ ಕೂಡಿ ಬರುವುದು. ಉತ್ತರಾರ್ಧದಲ್ಲಿ ಉತ್ತಮ ಅವಕಾಶ ದೊರೆಯುವುದು. ಭಾವನಾತ್ಮಕ ವಾತಾವರಣ ಇರುತ್ತದೆ. ವಿಳಂಬ, ಅಡಚಣೆ, ತೊಂದರೆ ಅನುಭವಿಸುವಿರಿ, ಆಪಘಾತ ಆಗದಿರುವುದರ ಬಗ್ಗೆ ಕಾಳಜಿ ವಹಿಸಿರಿ.

12. ಮೀನ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಪ್ರತಿಕೂಲ ಪ್ರಸಂಗದಿಂದ ಲಾಭ ಸಂಭವ, ಸಂವೇದನಶೀಲರಾಗಿರುವಿರಿ. ಭಾವನಾವೇಗವನ್ನು ತಡೆಯಿರಿ. ಕೌಟುಂಬಿಕ ಖರ್ಚು ಹೆಚ್ಚಾಗುವುದು. ಹಿರಿಯರ ಆರೋಗ್ಯ ಸಂಭಾಳಿಸಿರಿ. ಆರ್ಥಿಕ ಪ್ರಾಪ್ತಿ ಸಾಧಾರಣ

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2025 ರ ಜುಲೈ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ

1. ಪುನರ್ವಸು

ಈ ಮಳೆಯು ದಿನಾಂಕ 5/7/2026 ರಂದು ಮದ್ಯಾಹ್ನ 2.36 ಕ್ಕೆ ಕುದುರೆ ವಾಹನದ ಮೇಲೆ ಪುನರ್ವಸು ನಕ್ಷತ್ರದೊಳಗೆ ಆರಂಭವಾಗುತ್ತದೆ. ಸಂಪೂರ್ಣ ಕರ್ನಾಟಕ, ವಿಶೇಷವಾಗಿ ಮಧ್ಯ ಕರ್ನಾಟಕ ಮತ್ತು ಪೂರ್ವ ಕರ್ನಾಟಕದಲ್ಲಿ ರಭಸದ ಮಳೆ ಬೀಳುವ ಸಂಭವ. ಅನೇಕ ಕಡೆಗಳಲ್ಲಿ ಗಾಳಿ ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಂಭವವಿದೆ. 7 ರಿಂದ 8 ಮತ್ತು 11 ರಿಂದ 16 ರ ತನಕ ಎಲ್ಲಾ ಕಡೆಗೆ ಮಳೆಯಾಗುವ ಸಾಧ್ಯತೆಯಿದೆ.

2. ಪುಷ್ಯ

ಈ ಮಳೆಯು ದಿನಾಂಕ 6/7/2026 ರಂದು ಸಾಯಂಕಾಲ 4.40 ಕ್ಕೆ ಸರಿಯಾಗಿ ಪುಷ್ಯ ನಕ್ಷತ್ರದಲ್ಲಿ ನವಿಲು ವಾಹನದೊಂದಿಗೆ ಆರಂಭವಾಗುತ್ತದೆ. ಈ ಮಳೆಯು ಎಲ್ಲೆಡೆ ಉತ್ತಮ ರೀತಿಯಲ್ಲಿ ಆಗುವುದು, ಪಶ್ಚಿಮ ಭಾಗದ ಕೆಲವು ಸ್ಥಳಗಳಲ್ಲಿ ಮಹಾಪೂರ ಬರುವ ಸಾಧ್ಯತೆ, ಹಾಗೆಯೇ ಸಂಪೂರ್ಣ ಅಣೆಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗುವ ಕಾರಣ ಅಣೆಕಟ್ಟುಗಳು ಭರ್ತಿಯಾಗುವವು. 21 ರಿಂದ 25 ಮತ್ತು 28 ರಿಂದ 1 ರ ತನಕ ಇಡೀ ರಾಜ್ಯದಲ್ಲಿ ಉತ್ತಮ ಮಳೆಯಾಗುವುದು.

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲ
ಚಂದ್ರ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ
ಸೂರ್ಯ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ

[su_button target=”blank” background=”#ef2d30″ icon=”icon: calendar” text_shadow=”0px 0px 0px #000000″ title=”Kannada Calendar 2026 All Months”]ಕನ್ನಡ ಕ್ಯಾಲೆಂಡರ್ 2026[/su_button]

[su_button url=”https://kannadacalendar.in/june-calendar-kannada/” target=”blank” background=”#ef2d30″ icon=”icon: arrow-left” text_shadow=”0px 0px 0px #000000″ title=”June 2026 Kannada Calendar”]ಜೂನ್ 2026 ಕನ್ನಡ ಕ್ಯಾಲೆಂಡರ್‌[/su_button]

[su_button url=”https://kannadacalendar.in/august-month-calendar-kannada/” target=”blank” background=”#ef2d30″ icon=”icon: arrow-right” text_shadow=”0px 0px 0px #000000″ title=”August 2025 Kannada Calendar”]ಆಗಸ್ಟ್ 2026 ಕನ್ನಡ ಕ್ಯಾಲೆಂಡರ್‌[/su_button]

Share