December 2025 Calendar Kannada ಡಿಸೆಂಬರ್ 2025 ಕನ್ನಡ ಕ್ಯಾಲೆಂಡರ್‌ holidays in December month calendar kannada

ನಮಸ್ಕಾರ ಸ್ನೇಹಿತರೇ ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಡಿಸೆಂಬರ್ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಹಾಗೆ 4 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ‌ ವಿಶೇಷವಾಗಿ ಆಚರಿಸುವ ಕ್ರಿಸ್‌ ಮಸ್ ಹಬ್ಬ ನೋಡಬಹುದಾಗಿದೆ.

December 2025 Calendar Kannada

2025 ಡಿಸೆಂಬರ್ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು, ತಿಂಗಳು ಮಾಸ, ರಾಶಿ ಭವಿಷ್ಯ, ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಡಿಸೆಂಬರ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ.

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಭಾನುವಾರ04.30 – 06.0012.00 – 01.3003.00 – 04.30
ಸೋಮವಾರ07.30 – 09.0010.30 – 12.0010.30 – 03.00
ಮಂಗಳವಾರ03.00 – 04.3009.00 – 10.3012.00 – 01.30
ಬುಧವಾರ12.00 – 01.3007.30 – 09.0010.30 – 12.00
ಗುರುವಾರ01.30 – 03.0006.00 – 07.3009.00 – 10.30
ಶುಕ್ರವಾರ10.30 – 12.0003.00 – 04.3007.30 – 09.00
ಶನಿವಾರ09.00 – 10.3001.30 – 03.0006.00 – 07.30

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಡಿಸೆಂಬರ್ವಿವಾಹ ಮುಹೂರ್ತಗಳು2, 5
ಡಿಸೆಂಬರ್ವಾಸ್ತು ಶಾಂತಿ ಮುಹೂರ್ತಗಳು5, 6
ಡಿಸೆಂಬರ್ಉಪನಯನ ಮೂಹೂರ್ತಇರುವುದಿಲ್ಲ
ಡಿಸೆಂಬರ್ಶುಭ ದಿನ2, 3, 5, 6, 8, 11, 12, 13, 15, 21, 22, 25, 28, 29
ಡಿಸೆಂಬರ್ಮಧ್ಯಮ ದಿನ7, 10, 14, 27

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
4/12/2025ಗುರುವಾರಹೊಸ್ತಿಲ ಹುಣ್ಣಿಮೆ
19/12/2025
20/12/2025
ಶುಕ್ರವಾರ
ಶನಿವಾರ
ಎಳ್ಳ ಅಮವಾಸ್ಯೆ

ವಿಶೇಷ ದಿನಗಳು

ದಿನಾಂಕವಾರವಿಶೇಷ ದಿನ
4/12/2025ಗುರುವಾರದತ್ತಾತ್ರೇಯ ಜಯಂತಿ
25/12/2025ಗುರುವಾರಕ್ರಿಸ್‌ ಮಸ್

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
25/12/2025ಗುರುವಾರಕ್ರಿಸ್‌ ಮಸ್

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
13/12/2025ಶನಿವಾರ2 ನೇ ಶನಿವಾರ
27/12/2025ಶನಿವಾರ4 ನೇ ಶನಿವಾರ

ಈ ತಿಂಗಳ ರಾಶಿ ಫಲ

1. ಮೇಷ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ, ಸಾಮಾಜಿಕ ಕಾರ್ಯಗಳಲ್ಲಿ ಸಹಭಾಗಿ, ಉತ್ತರಾರ್ಧದಲ್ಲಿ ತರಬೇತಿಗಾಗಿ ಆಯ್ಕೆ. ಆಕಸ್ಮಿಕವಾಗಿ ಧನಲಾಭ ಸಂಭವ. ಕೆಲಸಕ್ಕಾಗಿ ಪ್ರವಾಸ, ಸಾಹಿತಿಗಳಿಗೆ ಅನುಕೂಲ ಭಾಸವಾಗುವುದು. ಕೃಷಿ ಕಾರ್ಯಗಳು ಆಗುತ್ತವೆ.

2. ವೃಷಭ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಸ್ವಲ್ಪ ಅಹಂಕಾರ ಇರುವುದು. ಉತ್ತರಾರ್ಧದಲ್ಲಿ ದೈಹಿಕ ತೊಂದರೆ. ಖರ್ಚಿನ ಪ್ರಮಾಣ ಹೆಚ್ಚಾಗುವುದು. ಉದ್ಯೋಗದಲ್ಲಿ ಮಂದಿ ಇರುತ್ತದೆ. ಚಾಣಾಕ್ಷತೆ ಬಳಕೆಗೆ ಬರುತ್ತದೆ. ಪ್ರತಿಕೂಲ ಪ್ರಸಂಗದಿಂದ ಲಾಭ. ಕಾಯಂ ನೌಕರಿ ಸಿಗುತ್ತದೆ.

3. ವಿಥುನ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಶಕ್ತಿ ಕಡಿಮೆಯಿದ್ದರೂ ಅವಕಾಶವೊಂದು ಲಭಿಸುತ್ತದೆ. ಉತ್ತರಾರ್ಧದಲ್ಲಿ ಭಾವನಾತ್ಮಕ ಗೊಂದಲ ಸಾಧ್ಯ. ಸರಕಾರಿ ಕಾರ್ಯಕ್ಕಾಗಿ ಖರ್ಚು ಆಗುತ್ತದೆ. ವಿದೇಶ ಪ್ರವಾಸ ಆಗುತ್ತದೆ. ಕಾಯಿಲೆ ಬರುವ ಸಾಧ್ಯತೆ. ಅಧಿಕಾರ ವ್ಯವಸ್ಥಿತವಾಗಿ ನಡೆಯುವುದಿಲ್ಲ.

4. ಕರ್ಕ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ವಿದೇಶ ಪಯಣದ ಅವಕಾಶ, ಆದ್ಯಾತ್ಮಿಕತೆ ಹೆಚ್ಚಾಗುತ್ತದೆ. ಪೂರ್ವಾರ್ಧದಲ್ಲಿ ಮನಸ್ಸಿನ ತೊಳಲಾಟ ಆಗುತ್ತಿರುತ್ತದೆ. ಉತ್ತರಾರ್ಧದಲ್ಲಿ ಅವಕಾಶ ದೊರೆಯುತ್ತದೆ. ಪ್ರತಿಕೂಲದಿಂದ ಲಾಭ. ವಿವೇಕ ಬುದ್ದಿ ಜಾಗೃತವಾಗಿಡಿರಿ.

5. ಸಿಂಹ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಆರ್ಥಿಕ ಲಾಭ ಆಗುತ್ತದೆ. ಕಂಕಣ ಬಲ ಕೂಡಿ ಬರುವುದು. ಸಂತಾನ ಪ್ರಾಪ್ತಿ. ವಿದ್ಯಾಭ್ಯಾಸದಲ್ಲಿ ಪ್ರಗತಿ ಆಗುವುದು. ಪ್ರಾಪಂಚಿಕ ಕಾಳಜಿ ಇರುವುದು. ವಿಳಂಬ, ತೊಂದರೆ, ಅಡಚಣೆ ಅನುಭವಿಸುವಿರಿ. ಆರ್ಥಿಕ ಪ್ರಾಪ್ತಿ ಸಾಧಾರಣ.

6. ಕನ್ಯಾ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಕೆಲಸದಲ್ಲಿ ಯಶಸ್ಸು ಸಿಗುತ್ತಿರುತ್ತದೆ. ಉತ್ತರಾರ್ಧದಲ್ಲಿ ಪ್ರಾಪಂಚಿಕ ಕೆಲಸದಲ್ಲಿ ಮಗ್ನ ಆಗುವಿರಿ. ತಂದೆ ತಾಯಿಯವರ ಕಾಳಜಿ ತೆಗೆದುಕೊಳ್ಳಿರಿ. ಕೆಲಸದ ಗುಣಮಟ್ಟ ಹೆಚ್ಚಿಸಿರಿ. ಸ್ವಂತ ಆರೋಗ್ಯ ಸಂಭಾಳಿಸಿರಿ. ಪ್ರತಿಕೂಲ ಘಟನೆಯಿಂದ ಲಾಭ ಸಂಭವ.

7. ತುಲಾ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಕುಶಲತೆ, ಚಾಣಾಕ್ಷತೆ, ಜಾಗರೂಕತೆ, ಸೌಂದರ್ಯ ದೃಷ್ಟಿ ಇವುಗಳಿಂದ ಕೆಲಸಗಳು ಯಶಸ್ವಿ ಆಗುತ್ತದೆ. ಕಿವಿನೋವು ಕಾಣಿಸುವುದು. ಉತ್ತರಾರ್ಧದಲ್ಲಿ ಪ್ರಾಪಂಚಿಕ ಕಾಳಜಿ ತೆಗೆದುಕೊಳ್ಳುವಿರಿ. ಕಂಕಣ ಬಲ ಕೂಡಿ ಬರುವುದು. ಪ್ರಸಿದ್ಧಿ ದೊರೆಯಬಹುದು.

8. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಉದ್ಯೋಗದಲ್ಲಿ ಚೈತನ್ಯ ತರುವಿರಿ. ಉತ್ತರಾರ್ಧದಲ್ಲಿ ಕುಟುಂಬದೊಳಗೆ ಮನ ಬಂದಂತೆ ಇರುತ್ತೀರಿ. ಖೆದಚು ಹೆಚ್ಚಾಗುತ್ತದೆ. ಪಿತ್ರಾರ್ಜಿತ ಎಸ್ಟೇಟಿನ ಕೆಲಸಗಳು ಬರುವುದು. ದೈಹಿಕ ತೊಂದರೆಯ ಕಡೆಗೆ ದುರ್ಲಕ್ಷ್ಯ ಮಾಡಬೇಡಿರಿ. ಕಿವಿನೋವು ಬರಬಹುದು.

9. ಧನು ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಖರ್ಚಿನ ಪ್ರಮಾಣ ವೃದ್ಧಿ. ಪ್ರತಿಷ್ಠೆಯನ್ನು ಉಳಿಸಿಕೊಳ್ಳಿರಿ. ಉತ್ತರಾರ್ಧದಲ್ಲಿ ಕುಶಲತೆಯಿಂದ ಉದ್ಯೋಗದಲ್ಲಿ ವೃದ್ದಿ ಆಗುವುದು. ಭಾವನಾವೇಗ ತಡೆಯಿರಿ. ಕಂಕಣ ಬಲ ಕೂಡಿ ಬರುವುದು. ಬಕ್ಷೀಸು ಸಿಗುವವು. ಮಾನಸಿಕ ಸಮತುಲನ ಕಾಪಾಡಿಕೊಳ್ಳಿರಿ.

10. ಮಕರ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಆರ್ಥಿಕ ಲಾಭ ಉತ್ತಮವಾಗಿರುತ್ತದೆ. ನಿಮ್ಮ ಕಾರ್ಯಗಳನ್ನು ಪ್ರಶಂಸಿಸುವರು. ಉತ್ತರಾರ್ಧದಲ್ಲಿ ಖರ್ಚಿನ ಪ್ರಮಾಣ ಅಧಿಕ. ಭಾವನಾವೇಗ ತಡೆಯಿರಿ. ಕಾನೂನು ವಿಷಯದ ಕಡೆಗೆ ವಿಶೇಷ ಗಮನವಿರಲಿ. ಕಲ್ಪನಾ ಶಕ್ತಿ ಉತ್ತಮ.

11. ಕುಂಭ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಗುರುಕೃಪೆ ಇರುತ್ತದೆ. ನೌಕರಿಯಲ್ಲಿ ಬಡ್ತಿಯ ಸಾಧ್ಯತೆ ಇದೆ. ಉತ್ತರಾರ್ಧದಲ್ಲಿ ಅನೇಕ ಮಾರ್ಗಗಳಿಂದ ಆರ್ಥಿಕ ಲಾಭ ಸಂಭವ. ಕುಟುಂಬದೊಳಗಿನ ಸಮಸ್ಯೆ ಅಕಲನಕ್ಕೆ ಬಾರದಿರುವುದು. ಸಮಾಜಮುಖಿ ಆಗಿರುವಿರಿ.

12. ಮೀನ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಸಾಮಾಜಿಕ ಕಾರ್ಯದಲ್ಲಿ ಭಾಗಿ. ಉತ್ತರಾರ್ಧದಲ್ಲಿ ಉದ್ಯೋಗದಲ್ಲಿ ದೊಡ್ಡದಾದ ವ್ಯವಹಾರ ಸಂಭವ. ನೌಕರಿಯಲ್ಲಿ ಅಧಿಕಾರ ಒಳ್ಳೆಯ ರೀತಿಯಲ್ಲಿ ನಡೆಯುವುದಿಲ್ಲ, ಆದರೂ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವಿಳಂಬ, ತೊಂದರೆ, ಅಡಚಣೆ ಅನುಭವಿಸುವಿರಿ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2025 ರ ಡಿಸೆಂಬರ್ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಬಹುದಾಗಿದೆ. ಹಾಗೆ ಈ ತಿಂಗಳಲ್ಲಿ ಯಾವುದೇ ಮಳೆಗಾಲ ಇರುವುದಿಲ್ಲ ಚಂಡಮಾರುತಗಳು ಉಂಟಾಗಿ ಮಳೆ ಬರಬಹುದಾಗಿದೆ.

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲ
ಚಂದ್ರ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ
ಸೂರ್ಯ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ

ಕನ್ನಡ ಕ್ಯಾಲೆಂಡರ್ 2025

ನವೆಂಬರ್ 2025 ಕನ್ನಡ ಕ್ಯಾಲೆಂಡರ್‌

‌ಜನವರಿ ಕನ್ನಡ ಕ್ಯಾಲೆಂಡರ್‌

Share