August 2025 Calendar Kannada ಅಗಸ್ಟ್ 2025 ಕನ್ನಡ ಕ್ಯಾಲೆಂಡರ್‌ panchanga august month calendar kannada holidays in August karnataka

ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2025ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಅಗಸ್ಟ್ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಹಾಗೆ 5 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ‌ ವಿಶೇಷವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ ಬಂದ ದಿನವನ್ನಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ ಮತ್ತು ವರಮಹಾಲಕ್ಷ್ಮೀ ವ್ರತ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬ ಕೂಡ ಆಗಸ್ಟ್‌ ತಿಂಗಳಿನಲ್ಲಿ ಬರುತ್ತದೆ. ಹಾಗೆ ಈ ತಿಂಗಳಿನಲ್ಲಿ ವಿಶೇಷವಾಗಿ ಅಣ್ಣ ತಂಗಿ ಪ್ರೀತಿಯ ಸಂಕೇತವನ್ನಾಗಿ ಆಚರಿಸುವ ಹಬ್ಬ ರಕ್ಷಾಬಂಧನ ಹಬ್ಬವನ್ನ ನೋಡಬಹುದಾಗಿದೆ.

2025 ಅಗಸ್ಟ್ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಅಗಸ್ಟ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಭಾನುವಾರ04.30 – 06.0012.00 – 01.3003.00 – 04.30
ಸೋಮವಾರ07.30 – 09.0010.30 – 12.0010.30 – 03.00
ಮಂಗಳವಾರ03.00 – 04.3009.00 – 10.3012.00 – 01.30
ಬುಧವಾರ12.00 – 01.3007.30 – 09.0010.30 – 12.00
ಗುರುವಾರ01.30 – 03.0006.00 – 07.3009.00 – 10.30
ಶುಕ್ರವಾರ10.30 – 12.0003.00 – 04.3007.30 – 09.00
ಶನಿವಾರ09.00 – 10.3001.30 – 03.0006.00 – 07.30

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಅಗಸ್ಟ್ವಿವಾಹ ಮುಹೂರ್ತಗಳುಇರುವುದಿಲ್ಲ
ಅಗಸ್ಟ್ವಾಸ್ತು ಶಾಂತಿ ಮುಹೂರ್ತಗಳು4, 6, 9, 11, 14, 20
ಅಗಸ್ಟ್ಉಪನಯನ ಮೂಹೂರ್ತಇರುವುದಿಲ್ಲ
ಅಗಸ್ಟ್ಶುಭ ದಿನ 3, 7, 9, 10, 11, 14, 17, 19, 24, 25, 26, 28
ಅಗಸ್ಟ್ಮಧ್ಯಮ ದಿನ4, 12, 18

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
9/8/2025ಶನಿವಾರನೂಲ ಹುಣ್ಣಿಮೆ
23/8/2025ಶನಿವಾರಬೆನಕನ ಅಮವಾಸ್ಯೆ

ವಿಶೇಷ ದಿನಗಳು

ದಿನಾಂಕವಾರವಿಶೇಷ ದಿನ
8/8/2025ಶುಕ್ರವಾರವರಮಹಾಲಕ್ಷ್ಮಿ ವ್ರತ
9/8/2025ಶನಿವಾರರಕ್ಷಾಬಂಧನ
12/8/2025ಮಂಗಳವಾರಅಂಗಾರಕ ಸಂಕಷ್ಟ ಚತುರ್ಥಿ
15/8/2025ಶುಕ್ರವಾರಸ್ವಾತಂತ್ರ್ಯ ದಿನಾಚರಣೆ, ಶ್ರೀ ಕೃಷ್ಣ ಜನ್ಮಾಷ್ಟಮಿ
26/8/2025ಮಂಗಳವಾರಸ್ವರ್ಣ ಗೌರಿ ವ್ರತ
27/8/2025ಬುಧವಾರಶ್ರೀ ಗಣೇಶ ಚತುರ್ಥಿ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
15/8/2025ಶುಕ್ರವಾರಸ್ವಾತಂತ್ರ್ಯ ದಿನಾಚರಣೆ
27/8/2025ಬುಧವಾರಶ್ರೀ ಗಣೇಶ ಚತುರ್ಥಿ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
9/8/2025ಶನಿವಾರ2 ನೇ ಶನಿವಾರ
23/8/2025ಶನಿವಾರ4 ನೇ ಶನಿವಾರ

ಈ ತಿಂಗಳ ರಾಶಿ ಫಲ

1. ಮೇಷ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಪ್ರಾಪಂಚಿಕದಲ್ಲಿ ನಾಟಕೀಯ ಪ್ರಸಂಗವನ್ನು ಅನುಭವಿಸುವಿರಿ. ಮಕ್ಕಳು, ಶಿಕ್ಷಣ ಈ ವಿಷಯದಲ್ಲಿ ಮನದ ತೊಳಲಾಟ ಆಗುವುದು. ಕಲೆ – ಕ್ರೀಡಾ ಕ್ಷೇತ್ರದಲ್ಲಿ ಮಿಂಚುವಿರಿ. ವಿಳಂಬ, ಅಡಚಣೆ, ತೊಂದರೆ ಅನುಭವಿಸುವಿರಿ.

2. ವೃಷಭ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಪೂರ್ವಾರ್ಧದಲ್ಲಿ ಕೆಲಸಗಳು ಯಶಸ್ವಿಯಾಗುವವು. ಉತ್ತರಾರ್ಧದಲ್ಲಿ ಕರ್ತವ್ಯ ಮತ್ತು ಸಮಸ್ಯೆಗಳತ್ತ ಗಮನವಿರಲಿ. ಕಂಕಣ ಬಲ ಕೂಡಿ ಬರುವುದು, ಕಾಯಂ ನೌಕರಿ ದೊರೆಯುತ್ತದೆ. ಗಂಟಲು ಬೇನೆ ಕಾಣಬಹುದು.

3. ವಿಥುನ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಆರ್ಥಿಕ ಪ್ರಾಪ್ತಿ ಮತ್ತು ಕೌಟುಂಬಿಕ ಸುಖ ಸಾಧಾರಣ, ಉತ್ತರಾರ್ಧದಲ್ಲಿ ಪ್ರಗತಿಯ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಉದರದ ತೊಂದರೆ ಆಗುವುದು, ಪ್ರಾಪರ್ಟಿಯ ಕೆಲಸಗಳು ಆಗುವವು. ಸಾಮಾಜಿಕ ಕಾರ್ಯದಿಂದ ಲಾಭ.

4. ಕರ್ಕ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಬರಹಗಳಲ್ಲಿ ತಪ್ಪುಗಳು ಆಗುವವು. ಪ್ರಕೃತಿಯಲ್ಲಿ ಕೊಂಚ ಆಚೆ ಈಚೆ ಆಗುವ ಸಾಧ್ಯತೆ, ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ, ದೂರದ ಪಯಣ ಸಾಧ್ಯತೆ. ಪ್ರತಿಕೂಲ ಘಟನೆಯಿಂದ ತೊಂದರೆ, ಸಂಭವ, ಚಿನ್ನಾಭರಣ ಖರೀದಿಸುವಿರಿ.

5. ಸಿಂಹ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಉತ್ತರಾರ್ಧದಲ್ಲಿ ಮಹಾತ್ವಾಕಾಂಕ್ಷಿ ಅಧಿಕ, ಆದರೆ ಒಮ್ಮೆಲೆ ಸಿಟ್ಟು ಬರುವುದು. ಕೌಟುಂಬಿಕ ಖರ್ಚು ವ್ಯರ್ಥವಾಗುತ್ತದೆ. ಭಾವನಾವೇಗ ತಡೆಯಿರಿ. ಕಂಕಣ ಬಲ ಕೂಡಿ ಬರುವುದು. ಮಕ್ಕಳಿಗೆ ತೊಂದರೆ, ಶಿಕ್ಷಣದಲ್ಲಿ ಅಡ್ಡಿ ಆಗಬಹುದು.

6. ಕನ್ಯಾ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಭಾವನಾವೇಗವನ್ನು ನಿಯಂತ್ರಿಸಿರಿ, ಹಠವಾದಿ ಆಗುವಿರಿ. ಕೆಲಸದಲ್ಲಿ ಜೋಡಿದಾರನ ಸಹಾಯ ಸಿಗುತ್ತದೆ. ಅಪರಾಧಿ ತಿರ್ಮಾನದ ಕಾನೂನುಗಳಲ್ಲಿ ಸಿಲುಕದಿರಿ. ಆರ್ಥಿಕ ಪ್ರಾಪ್ತಿ ಸಾಧಾರಣ. ಪ್ರತಿಕೂಲ ಪ್ರಸಂಗದಿಂದ ಲಾಭ ಸಂಭವ.

7. ತುಲಾ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ವ್ಯವಸಾಯ ಉದ್ಯೋಗದಲ್ಲಿ ನಾಟಕೀಯ ಘಟನೆ ಸಂಭವಿಸಬಹುದು. ನೌಕರಿಯಲ್ಲಿ ಬಡ್ತಿ ಸಿಗುತ್ತದೆ. ಭಾವನಾವೇಗ ನಿಯಂತ್ರಿಸಿರಿ. ವಿವೇಕ ಬುದ್ದಿಯನ್ನು ಜಾಗೃತವಾಗಿಡಿರಿ. ಗುರುಕೃಪೆ ಆಗುತ್ತದೆ. ವಿದೇಶ ಪ್ರವಾಸ ಸಾಧ್ಯತೆ.

8. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಸಾಮಾಜಿಕ ಕೆಲಸದಲ್ಲಿ ಭಾಗಿಯಾಗುವಿರಿ. ಧಾರ್ಮಿಕ ಕಾರ್ಯಗಳಿಗೆ ವೆಚ್ಚ ಮಾಡುವಿರಿ. ಉತ್ತರಾರ್ಧದಲ್ಲಿ ಬಡ್ತಿಯಲ್ಲಿ ಅಡ್ಡಿ ಉಂಟಾಗುವುದು. ಭಾವನಾತ್ಮಕ ಕಹಿತನ ಅನುಭವಿಸಿವಿರಿ. ಹೊಸ ವಸ್ತುಗಳು ಸಿಗುತ್ತವೆ. ಅಪೇಕ್ಷೆಯಂತೆ ಲಾಭ ಆಗುತ್ತದೆ.

9. ಧನು ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಬಹುಮಾನಗಳು ದೊರೆಯುವವು. ಉದ್ಯೋಗದಲ್ಲಿ ಮಂದಿ ಇದೆ. ಉತ್ತರಾರ್ಧದಲ್ಲಿ ಕೆಲಸಗಳಿಗೆ ದೈವದ ಬೆಂಬಲ ಸಿಗುವುದು. ಒಕ್ಕಲುತನ, ಪ್ರಾಪರ್ಟಿಯ ಕೆಲಸಗಳು ಆಗುತ್ತವೆ. ವಿಳಂಬ, ತೊಂದರೆ, ಅಡಚಣೆ ಅನುಭವಿಸುವಿರಿ. ಆರ್ಥಿಕ ಲಾಭ ಆಗುತ್ತದೆ.

10. ಮಕರ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಭಾವುಕತನದ ನಾಟಕೀಯ ಪ್ರಸಂಗಗಳು ಜರುಗುವವು. ಉತ್ತರಾರ್ಧದಲ್ಲಿ ದೈಹಿಕ ತೊಂದರೆಗಳು, ಉದ್ಯೋಗದಲ್ಲಿ ಮಂದಿ ಇರುವುದು. ಕೌಟುಂಬಿಕ ವೆಚ್ಚವು ಆವಾಸ್ತವ ರೂಪದಲ್ಲಿ ಹೆಚ್ಚಾಗುತ್ತದೆ. ಖೊಟ್ಟಿ ಕಾಗದ ಪತ್ರ ಮಾಡಬೇಡಿರಿ.

11. ಕುಂಭ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಿನಲ್ಲಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಸ್ವರ್ಧಕರನ್ನು ಅರಿಯುವ ಯತ್ನ ಮಾಡಿ. ಉತ್ತರಾರ್ಧದಲ್ಲಿ ಅಹಂಕಾರದಿಂದ ಭಾವನಾತ್ಮಕ ತೊಂದರೆ ಆಗುತ್ತದೆ. ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ವಿಳಂಬ, ಅಡಚಣೆ, ತೊಂದರೆ ಅನುಭವಿಸುವಿರಿ.

12. ಮೀನ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಿನಲ್ಲಿ ಮನಸ್ಸಿಗೆ ತೊಳಲಾಟ, ಶಿಕ್ಷಣಕ್ಕಿಂತ ನಾಟಕ ಕ್ಷೇತ್ರದಲ್ಲಿ ಅಭಿರುಚಿ ಇರುತ್ತದೆ. ಉತ್ತರಾರ್ಧದಲ್ಲಿ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ವಿದೇಶ ಪ್ರವಾಸ, ಪ್ರವಾಸ ಸಾಧ್ಯತೆ. ಜೋಡಿದಾರನ ಸಲಹೆ ಪ್ರಯೋಜನಕ್ಕೆ ಬರುತ್ತದೆ. ಕೃಷಿ ಕೆಲಸಗಳಾಗುತ್ತವೆ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2025 ರ ಅಗಸ್ಟ್ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆ ಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ

1. ಆಶ್ಲೇಷಾ ಮಳೆ

ಈ ಮಳೆಯು ದಿನಾಂಕ 3/8/2025 ರಂದು ಸಾಯಂಕಾಲ 6.34ಕ್ಕೆ ಕತ್ತೆ ವಾಹನದ ಮೇಲೆ ಆಶ್ಲೇಷಾ ನಕ್ಷತ್ರದಲ್ಲಿ ಆರಂಭವಾಗುತ್ತದೆ. ಈ ನಕ್ಷತ್ರದ ಮಳೆಯು ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಹೆಚ್ಚು ಆಗುವ ಸಂಭವ. ಅದರಂತೆ ಮಧ್ಯ ಕರ್ನಾಟಕ ಪ್ರದೇಶದಲ್ಲಿ ಅಲ್ಪ ಮಳೆ ಬೀಳಬಹುದು. 4 ರಿಂದ 10 ಈ ಕಾಲದಲ್ಲಿ ಪಶ್ಚಿಮ ಭಾಗದಲ್ಲಿ ಮಳೆಯಾಗುವ ಸಂಭವವಿದೆ.

2. ಮಘಾ ಮಳೆ

ಈ ಮಳೆಯು ದಿನಾಂಕ 17/8/2025 ರಂದು ಸಾಯಂಕಾಲ 4.06 ಕ್ಕೆ ಸರಿಯಾಗಿ ಮಘಾ ನಕ್ಷತ್ರದಲ್ಲಿ ಕಪ್ಪೆ ವಾಹನದೊಂದಿಗೆ ಆರಂಭವಾಗುತ್ತದೆ. ಈ ನಕ್ಷತ್ರದಲ್ಲಿ ಅತೀ ಮಳೆಯ ಸಂಭವ, ಆದರೆ ಉತ್ತರ ಕರ್ನಾಟಕದಲ್ಲಿ ಮಧ್ಯಮ ಸ್ವರೂಪದ ಮಳೆಯಾಗುವುದು. ಹಾಗೆಯೇ ಸಂಪೂರ್ಣ ರಾಜ್ಯದಲ್ಲಿ ಮಧ್ಯಮ ಮಳೆ, ಪೂರ್ವ ಭಾಗದಲ್ಲಿ ಮಾತ್ರ ಕೆಲವು ಕಡೆಗೆ ಮಳೆಯ ಸೆಳೆತ ಇರುವುದು ಕಾಣಬಹುದು. ಆದರೆ ಮಳೆ ಬೀಳುವುದಿಲ್ಲ. 18 ರಿಂದ 23 ರ ಕಾಲದಲ್ಲಿ ಉತ್ತಮ ಮಳೆಯ ಸಂಭವವಿದೆ.

3. ಪೂರ್ವಾ ಫಾಲ್ಗುಣಿ

ಈ ಮಳೆಯು ದಿನಾಂಕ 31/8/2025 ರಂದು ಮಧ್ಯಾಹ್ನ 1.40 ಕ್ಕೆ ಸರಿಯಾಗಿ ಪೂರ್ವಾ ಫಾಲ್ಗುಣಿ ನಕ್ಷತ್ರದಲ್ಲಿ ಎಮ್ಮೆ ವಾಹನದೊಂದಿಗೆ ಆರಂಭವಾಗುತ್ತದೆ. ಈ ಮಳೆಯು ಉತ್ತಮವಾಗಿರುತ್ತದೆ, ಆದರೆ ಅನಿಯಮಿತ ಸ್ವರೂಪದಲ್ಲಿ ಮಳೆ ಬೀಳುವುದು. ಸ್ವಲ್ಪ ಸ್ವಲ್ಪ ಸಮಯದಲ್ಲಿ ಅಲ್ಪ ಸ್ವಲ್ಪ ಈ ರೂಪದಲ್ಲಿ ಇಡೀ ಕರ್ನಾಟಕದಾದ್ಯಂತ ಮಳೆಯಾಗುವ ಸಂಭವ. ವಿಶೇಷವಾಗಿ ಈ ಬಗೆಯ ಮಳೆಯು ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಕಾಣಬಹುದು. ಸಪ್ಟೆಂಬರ್‌ 1 ರಿಂದ 4 ಮತ್ತು 6 ರಿಂದ 10 ಈ ಕಾಲಘಟ್ಟದಲ್ಲಿ ಉತ್ತಮ ಮಳೆಯಾಗಲಿದೆ.

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲ
ಚಂದ್ರ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ
ಸೂರ್ಯ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ

ಕನ್ನಡ ಕ್ಯಾಲೆಂಡರ್ 2025

ಜುಲೈ 2025 ಕನ್ನಡ ಕ್ಯಾಲೆಂಡರ್‌

‌ಸೆಪ್ಟಂಬರ್ 2025 ಕನ್ನಡ ಕ್ಯಾಲೆಂಡರ್‌

Share