January 2025 Kannada Calendar, New year today calendar ಜನವರಿ 2025 ಕನ್ನಡ ಕ್ಯಾಲೆಂಡರ್, ಹೊಸ ವರ್ಷದ ಕ್ಯಾಲೆಂಡರ್, January month kannada panchanga, January Kannada Calendar 2025
ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಜನವರಿ ತಿಂಗಳಿನ ಕ್ಯಾಲೆಂಡರ್ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. “ಕ್ಯಾಲೆಂಡರ್ ಎಂದರೆ ಸಮಯವನ್ನು ಲೆಕ್ಕಹಾಕುವ ಉದ್ದೇಶಕ್ಕಾಗಿ ಸಮಯದ ಘಟಕಗಳನ್ನು ಸಂಘಟಿಸುವ ಒಂದು ಉತ್ತಮ ವ್ಯವಸ್ಥೆಯಾಗಿದೆ”. ಈ ಲೇಖನದಲ್ಲಿ ವಿವರವಾದ ಮಾಹಿತಿಯನ್ನು ತಿಳಿಸಲಾಗಿದೆ ಕೊನೆಯವರೆಗೂ ಓದಿ.

2024 ರ ಹಳೆಯ ವರ್ಷ ಮುಗಿದು ಹೊಸ ವರ್ಷ2025 ಬರುತ್ತದ್ದಂತೆಯೇ ಎಲ್ಲರ ಏಳಿಗೆ ಆಗಬೇಕೆನ್ನುವುದು ನಮ್ಮ ಆಶಯ. ಆದರೆ ನಿಮ್ಮ ಏಳಿಗೆ ಹಾಗು ದಿನಭವಿಷ್ಯ ಮತ್ತು ಪ್ರತೀ ದಿನದ ಶುಭಗಳಿಗೆ ಮತ್ತು ಅಶುಭಗಳಿಗೆ ತಿಳಿದುಕೊಳ್ಳಲು ನಮಗೆ ಕ್ಯಾಲೆಂಡರ್ ಬಹಳ ಮುಖ್ಯ ಹಾಗಾಗಿ ನಮ್ಮ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ನೆಡೆಯುವ ಶುಭಕಾರ್ಯಗಳು, ಜನ್ಮ ಪತ್ರಿಕೆ ಪಂಚಾಗ, ಸರ್ಕಾರಿ ರಜೆ ದಿನಗಳು, ಮಾಸ ಹಬ್ಬ ಹರಿದಿನಗಳು, ಮತ್ತು ಋತುಮಾನದ ವಿಷಯ ಹಾಗೂ ರಾಶಿಭವಿಷ್ಯ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀವು ನಮ್ಮ ಕನ್ನಡ ಕ್ಯಾಲೆಂಡರ್ ಮುಖಾಂತರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ವಾರ, ಮಾಸ, ತಿಥಿ, ನಕ್ಷತ್ರ, ಶುಭಗಳಿಗೆ, ಅಶುಭ ಘಳಿಗೆ , ಇವುಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ಕನ್ನಡ ಭಾಷೆಯಲ್ಲಿ ಹಲವಾರು ಕ್ಯಾಲೆಂಡರ್ ಗಳು ಇವೆ ಅವು ಯಾವುವು ಎಂದು ಈ ಕೆಳಗಿನ ಹೆಸರಿನ ಮುಖಾಂತರ ತಿಳಿಯಬಹುದಾಗಿದೆ.
2025 ಜನವರಿಯಲ್ಲಿ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ.
ಜನವರಿ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ
ನಮ್ಮ ಈ ಕನ್ನಡ ಕ್ಯಾಲೆಂಡರ್ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ನೀವು ಈ ಕೆಳಗಿನಂತೆ ತಿಳಿಯಬಹುದಾಗಿದೆ
ವಾರದ ಹೆಸರು | ರಾಹು ಕಾಲ | ಗುಳಿ ಕಾಲ | ಯಮಗಂಡ ಕಾಲ |
---|---|---|---|
ಭಾನುವಾರ | 04.30 – 06.00 | 12.00 – 01.30 | 03.00 – 04.30 |
ಸೋಮವಾರ | 07.30 – 09.00 | 10.30 – 12.00 | 01.30 – 03.00 |
ಮಂಗಳವಾರ | 03.00 – 04.30 | 09.00 – 10.30 | 12.00 – 01.30 |
ಬುದವಾರ | 12.00 – 01.30 | 07.30 – 09.00 | 10.30 – 12.00 |
ಗುರುವಾರ | 01.30 – 03.00 | 06.00 – 07.30 | 09.00 – 10.30 |
ಶುಕ್ರವಾರ | 10.30 – 12.00 | 03.00 – 04.30 | 07.30 – 09.00 |
ಶನಿವಾರ | 09.00 – 10.30 | 01.30 – 03.00 | 06.00 – 07.30 |
ಶುಭ ಕಾರ್ಯಗಳಿಗೆ ಉತ್ತಮ ದಿನಗಳು
ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಂಖಾಂತರ ತಿಳಿಯಬಹುದಾಗಿದೆ
ತಿಂಗಳು | ಶುಭ ಮುಹೂರ್ತದ ಹೆಸರು | ದಿನಾಂಕ |
---|---|---|
ಜನವರಿ | ಶುಭ ದಿನ | 1, 2, 5, 6, 7, 8, 12, 17, 19, 21, 22, 26, 31 |
ಜನವರಿ | ಮಧ್ಯಮ ದಿನ | 4,14, 24, 30 |
ಜನವರಿ | ವಿವಾಹ ಮುಹೂರ್ತಗಳು | 16, 17, 19, 21, 22, 26 |
ಜನವರಿ | ವಾಸ್ತು ಶಾಂತಿ ಮುಹೂರ್ತಗಳು | 1, 2, 10, 20, 22, 31 |
ಜನವರಿ | ಉಪನಯನ ಮೂಹೂರ್ತ | 31 |
ಪ್ರತೀ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ
ದಿನಾಂಕ | ವಾರ | ಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು |
---|---|---|
13/1/2025 | ಸೋಮವಾರ | ಬನದ ಹುಣ್ಣಿಮೆ |
29/1/2025 | ಬುಧವಾರ | ಅವರಾತ್ರಿ ಅಮವಾಸ್ಯೆ |
ವಿಶೇಷ ದಿನಗಳು
ದಿನಾಂಕ | ವಾರ | ವಿಶೇಷ ದಿನಗಳು |
---|---|---|
12/1/2025 | ಭಾನುವಾರ | ಸ್ವಾಮಿ ವಿವೇಕಾನಂದ ಜಯಂತಿ |
14/1/2025 | ಮಂಗಳವಾರ | ಮಕರ ಸಂಕ್ರಾಂತಿ |
26/1/2025 | ಭಾನುವಾರ | ಗಣರಾಜ್ಯೋತ್ಸವ |
ಸರ್ಕಾರಿ ರಜಾ ದಿನಗಳು
ದಿನಾಂಕ | ವಾರ | ವಿಷಯ |
---|---|---|
14/01/2025 | ಮಂಗಳವಾರ | ಮಕರ ಸಂಕ್ರಮಣ |
26/01/2025 | ಭಾನುವಾರ | ಗಣರಾಜ್ಯೋತ್ಸವ |
ಬ್ಯಾಂಕ್ ರಜಾ ದಿನಗಳು
ದಿನಾಂಕ | ವಾರ | ರಜೆಯ ಕಾರಣ |
---|---|---|
11/1/2025 | ಶನಿವಾರ | 2 ನೇ ಶನಿವಾರ |
25/1/2025 | ಶನಿವಾರ | 4 ನೇ ಶನಿವಾರ |
ಈ ತಿಂಗಳ ರಾಶಿ ಫಲ
1. ಮೇಷ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ತರಬೇತಿಗಾಗಿ ವಿದೇಶಿ ಪ್ರವಾಸ, ಕಂಕಣ ಬಲ ಕೂಡಿ ಬರುವುದು. ನೌಕರಿ ಮತ್ತು ಉದ್ಯೋಗಗಳಲ್ಲಿ ಒಂದು ಹೆಜ್ಜೆ ಮುಂದಿರಲಿದ್ದೀರಿ. ಆರೋಗ್ಯ ಚೆನ್ನಾಗಿರುವುದು. ಶೈಕ್ಷಣಿಕ ಪ್ರಗತಿ ಸಾಧ್ಯ.
2. ವೃಷಭ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಉದ್ಯೋಗದಲ್ಲಿ ಸ್ಪರ್ಧೆ, ನೌಕರಿ ಕಷ್ಟ ಹಾಗೂ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ. ನಿಮ್ಮ ಕೆಲಸ ಕಾರ್ಯಗಳಿಗೆ ದೈವದ ಬೆಂಬಲ ಸಿಗಲಿದೆ. ನಿಮಗೆ ವಿದೇಶಿ ಪ್ರವಾಸದ ಅವಕಾಶ ಸಿಗಲಿದೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಖರ್ಚಾಗುತ್ತದೆ.
3. ವಿಥುನ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಉದ್ಯೋಗದಲ್ಲಿ ಸ್ಪರ್ಧೆ, ನಿಮ್ಮ ಚಾಣಾಕ್ಷತನದಿಂದ ನಿಮಗೆ ಲಾಭ ಆಗಲಿದೆ. ವಿದೇಶಿ ಪ್ರವಾಸ ಸಾಧ್ಯತೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಖರ್ಚಾಗುತ್ತದೆ.
4. ಕರ್ಕ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಉದ್ಯೋಗದಲ್ಲಿ ಹೂಡಿಕೆ ಮಾಡಿವ ಊಹೆ ತಪ್ಪಾಗಬಹುದು. ಆರ್ಥಿಕ ಪ್ರಾಪ್ತಿ ಸಾಧ್ಯ. ನಿಮ್ಮ ಕೆಲಸಕ್ಕೆ ಯಶಸ್ಸು ಸಿಗುತ್ತದೆ ಹಾಗೂ ವಿದೇಶಿ ಪ್ರವಾಸ ಸಾಧ್ಯತೆ.
5. ಸಿಂಹ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಹೆಚ್ಚಿನ ಆತ್ಮವಿಶ್ವಾಸ ಹಾಗೂ ಮಕ್ಕಳ ಮೇಲೆ ಮಮತೆ ಮೂಡುತ್ತದೆ. ಸಾಮಾಜಿಕ ಕಾರ್ಯದಲ್ಲಿ ಕಡಿಮೆ ಶ್ರಮದಿಂದ ಲಾಭ ಆಗುವುದು ಆದರೆ ಕಡಿಮೆ ಕೀರ್ತಿ ಲಭ್ಯ. ನಿಮ್ಮ ತಾಯಿ ತಂದೆಯರ ಸುಖಕ್ಕೆ ಅನಿಷ್ಟ ಕಾಡುವುದು.
6. ಕನ್ಯಾ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಪ್ರಾಪಂಚಿಕ ಚಿಂತೆಯಿರುವುದು. ಮದುವೆ, ಶಿಕ್ಷಣ, ವಿದೇಶಿ ಪ್ರವಾಸ, ಆಧ್ಯಾತ್ಮಿಕ ಪ್ರಗತಿಗೆ ಉತ್ತಮ ಕಾಲ. ಭಾವನಾತ್ಮಕ ಉದ್ವೇಗ ನಿರ್ಮಾಣ ಆಗಬಹುದು. ಹೊಸ ಸಂಸ್ಥೆಯನ್ನು ಸ್ಥಾಪಿಸುವಿರಿ
7. ತುಲಾ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಪೂರ್ವಾರ್ಧದಲ್ಲಿ ಕೆಲಸದಲ್ಲಿ ಯಶಸ್ಸು ಸಿಗಲಿದೆ, ಭಾವುಕತೆಯನ್ನು ತಡೆಯಿರಿ. ನಿಮ್ಮ ಮನೆಗೆ ಸಂಬಂಧಿಕರು ಬರೋದು ಹೋಗುವುದು ಹೆಚ್ಚಾಗುತ್ತದೆ. ಪ್ರತಿಕೂಲ ಪ್ರಸಂಗದಿಂದ ಲಾಭ.
8. ವೃಶ್ಚಿಕ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಸಾಧಾರಣ ಆರ್ಥಿಕ ಪ್ರಾಪ್ತಿ ಆಗಲಿದೆ. ಹಳೆ ಬಾಕಿ ವಸೂಲಿ, ಪ್ರಾಪರ್ಟಿ ಕೆಲಸ, ಕೃಷಿಯ ಕೆಲಸಗಳು ಆಗಲಿದೆ. ಮಹಿಳೆಯರಿಗೆ ಹೆರಿಗೆಯ ಸಮಯದಲ್ಲಿ ತೊಂದರೆ ಉಂಟಾಗಬಹುದು. ಕಲಾಕ್ಷೇತ್ರದಲ್ಲಿ ಮುಂದಿರಲಿದ್ದೀರಿ.
9. ಧನು ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ನೀವು ಮಾಡಿರುವ ಪುಣ್ಯತನ ಪ್ರಯೋಜನಕ್ಕೆ ಬರುತ್ತದೆ. ಹೊಸ ಹೊಸ ಕಲ್ಪನೆಗಳು ಹೊಳೆಯುತ್ತದೆ. ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ ಹಾಗೂ ಹೊಸ ಸ್ಥಾನ ಮಾನಗಳು ಸಿಗಬಹುದು. ಗೌರವ, ಅವಮಾನಗಳ ಪ್ರಸಂಗಗಳು ನಡೆಯುವವು ಜಾಗರೂಕರಾಗಿರಿ.
10. ಮಕರ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಪ್ರತಿಕೂಲ ಪ್ರಸಂಗದಿಂದ ಲಾಭ, ಆರೋಗ್ಯ ಸುಧಾರಿಸುವುದು. ಲೇಖನ, ಪ್ರಕಾಶನ, ಕಂಪ್ಯೂಟರ್, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿಯ ಮಾರ್ಗ ಸಿಗುತ್ತದೆ. ಶೀಘ್ರವೇ ಕಂಕಣ ಬಲ ಕೂಡಿ ಬರುತ್ತದೆ.
11. ಕುಂಭ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ಸಂಬಂಧಿಕರು, ಮಿತ್ರರು ಮತ್ತು ಮಕ್ಕಳ ಸಲುವಾಗಿ ಖರ್ಚು ಮಾಡುವಿರಿ. ಅಂತಿಮ ಕೆಲಸದಲ್ಲಿ ಯಶಸ್ಸು, ಧನ ಪ್ರಾಪ್ತಿಯಾಗಲಿದೆ. ಕುಟುಂಬದಲ್ಲಿ ಸಮ್ಮಿಶ್ರ ಅನುಭವಗಳು ಆಗಲಿದೆ. ಇತರರನ್ನು ದುಃಖಿಸದಿರಿ.
12. ಮೀನ ರಾಶಿ
ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ನಿಮ್ಮ ಯಶಸ್ಸಿಗೆ ಪ್ರತಿಫಲ ಸಿಗಲಿದೆ. ಖರ್ಚು ಹೆಚ್ಚಾದರೂ ಲಾಭದಾಯಕ ಕೆಲಸಗಳು ಆಗುತ್ತದೆ. ಕಂಕಣ ಬಲ ಕೂಡಿ ಬರುವುದು. ನಿಮ್ಮ ಹತ್ತಿರದ ವ್ಯಕ್ತಿಯ ವಿರಹ ಅರಿವಿಗೆ ಬರುವುದು.
ಮಳೆ ಭವಿಷ್ಯ
ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಖಾಂತರ ನೀವು 2025ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ಜನವರಿ ತಿಂಗಳಲ್ಲಿ ಮಳೆಗಾಲ ಇರುವುದಿಲ್ಲ
ಗ್ರಹಣ ವಿಚಾರಗಳು
ನಮ್ಮ ಈ ಕನ್ನಡ ಕ್ಯಾಲೆಂಡರ್ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ
ಗ್ರಹಣದ ಹೆಸರು | ದಿನಾಂಕ | ವಾರ | ಗ್ರಹಣ ಆರಂಭ ಕಾಲ | ಗ್ರಹಣ ಮೋಕ್ಷ ಕಾಲ |
---|---|---|---|---|
ಚಂದ್ರ ಗ್ರಹಣ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ |
ಸೂರ್ಯ ಗ್ರಹಣ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ |