June 2025 Calendar Kannada Free Pdf Download ಜೂನ್ 2025 ಕನ್ನಡ ಕ್ಯಾಲೆಂಡರ್‌ kannada panchanga june 2025

ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ಜೂನ್ ತಿಂಗಳಿನಲ್ಲಿ ಒಟ್ಟು 30 ದಿನಗಳಿದ್ದು ಹಾಗೆ ಈ ತಿಂಗಳು 5 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಬಕರೀದ್‌ ಹಬ್ಬ ಹಾಗೂ ಯೋಗ ದಿನ ಬರಲಿವೆ.

2025ರ ಜೂನ್ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು, ತಿಂಗಳು ಮಾಸ, ರಾಶಿ ಭವಿಷ್ಯ, ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರು ನಿಮ್ಮ ಉತ್ತಮ ಭವಿಷ್ಯವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಜೂನ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಭಾನುವಾರ04.30 – 06.0012.00 – 01.3003.00 – 04.30
ಸೋಮವಾರ07.30 – 09.0010.30 – 12.0010.30 – 03.00
ಮಂಗಳವಾರ03.00 – 04.3009.00 – 10.3012.00 – 01.30
ಬುಧವಾರ12.00 – 01.3007.30 – 09.0010.30 – 12.00
ಗುರುವಾರ01.30 – 03.0006.00 – 07.3009.00 – 10.30
ಶುಕ್ರವಾರ10.30 – 12.0003.00 – 04.3007.30 – 09.00
ಶನಿವಾರ09.00 – 10.3001.30 – 03.0006.00 – 07.30

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಜೂನ್ವಿವಾಹ ಮುಹೂರ್ತಗಳು2, 4, 5, 6, 8
ಜೂನ್ವಾಸ್ತು ಶಾಂತಿ ಮುಹೂರ್ತಗಳು5, 6
ಜೂನ್ಉಪನಯನ ಮುಹೂರ್ತಗಳು5, 6
ಜೂನ್ಶುಭ ದಿನ1, 2, 3, 4, 12, 13, 18, 19, 26, 27, 28, 29, 30
ಜೂನ್ಮಧ್ಯಮ ದಿನ5, 10, 11, 14, 15

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
11/6/2025ಬುಧವಾರಕಾರ ಹುಣ್ಣಿಮೆ
25/6/2025ಬುಧವಾರಮೆಣ್ಣೆತ್ತಿನ ಅಮವಾಸ್ಯೆ

ವಿಶೇಷ ದಿನಗಳು

ದಿನಾಂಕವಾರವಿಶೇಷ ದಿನ
7/6/2025ಶನಿವಾರಬಕರೀದ್
10/6/2025ಮಂಗಳವಾರವಟ ಪೂರ್ಣಿಮಾ
14/6/2025ಶನಿವಾರಸಂಕಷ್ಟ ಚತುರ್ಥಿ
21/6/2025ಶನಿವಾರಅಂತರಾಷ್ಟ್ರೀಯ ಯೋಗ ದಿನ
24/6/2025ಮಂಗಳವಾರಭೀಮನ ಅಮವಾಸ್ಯೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
7/6/2025ಶನಿವಾರಬಕರೀದ್‌ ಹಬ್ಬ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
14/6/2025ಶನಿವಾರ2 ನೇ ಶನಿವಾರ
28/6/2025ಶನಿವಾರ4 ನೇ ಶನಿವಾರ

ಈ ತಿಂಗಳ ರಾಶಿ ಫಲ

1. ಮೇಷ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಪೂರ್ವಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ, ಪ್ರಗತಿಯ ಪ್ರಸಿದ್ದಿ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಉತ್ತಮ, ಹತ್ತಿರದ ವ್ಯಕ್ತಿಯನ್ನು ದುಃಖಿಸಬೇಡಿರಿ. ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡುವಿರಿ. ಹೊಸ ಉಪಾಯ ಯೋಜನೆಗಳನ್ನು ರೂಪಿಸುವಿರಿ.

    2. ವೃಷಭ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಪಿತ್ತದ ತೊಂದರೆ, ಆರ್ಥಿಕ ಪ್ರಾಪ್ತಿಯಿದೆ. ಪಿತ್ರಾರ್ಜಿತ ಸಂಪತ್ತಿನ ಲಾಭವುಂಟು. ಉದರ ತೊಂದರೆ. ಮುತ್ಸದ್ದಿತನದಿಂದ ಯಶಸ್ಸು ಸಾಧ್ಯ. ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ತೊಂದರೆ. ಪ್ರತಿಕೂಲ ಪ್ರಸಂಗದಿಂದ ಲಾಭ ಸಂಭವ.

    3. ವಿಥುನ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಖರ್ಚು ಹೆಚ್ಚಾಗುವುದು. ಯಶಸ್ಸಿನ ಬಗ್ಗೆ ಖಚಿತವಾಗಿ ಹೇಳಲು ಬರುವುದಿಲ್ಲ, ಉತ್ತರಾರ್ಧದಲ್ಲಿ ಪ್ರಯತ್ನವಾದಿಗಳಾಗುವಿರಿ. ಆಹಾರದ ಮೇಲೆ ನಿಯಂತ್ರಣವಿರಲಿ. ವಿದೇಶಿ ಪ್ರವಾಸದ ಅವಕಾಶ ಸಾಧ್ಯತೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.

    4. ಕರ್ಕ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಆರ್ಥಿಕ ಲಾಭ ಆಗುವುದು. ಮಿತ್ರರಿಗಾಗಿ ಖರ್ಚು ಮಾಡುವಿರಿ. ಉತ್ತರಾರ್ಧದಲ್ಲಿ ವೆಚ್ಚ ಹೆಚ್ಚಾಗುವುದು. ಕಂಕಣ ಬಲ ಕೂಡಿ ಬರುವುದು. ವಿದೇಶಿ ಪ್ರವಾಸ ಸಾಧ್ಯತೆ. ಮಾತಿನಿಂದ ಜನರು ದೂರವಾಗುವರು. ಅಪಘಾತ ಸಂಭವಿಸಬಹುದು ಎಚ್ಚರವಹಿಸಿ.

    5. ಸಿಂಹ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ನೌಕರಿಯಲ್ಲಿ ಅನುಕೂಲತೆಯಿದೆ, ಆದರೆ ಉದ್ಯೋಗದಲ್ಲಿ ಸಂಘರ್ಷವಿರುವುದು. ಉತ್ತರಾರ್ಧದಲ್ಲಿ ದೊಡ್ಡ ಲಾಭ ಆಗಲಿದೆ. ಕೆಲಸದಲ್ಲಿ ಯಶಸ್ಸು ಸಿಗುತ್ತಿರುತ್ತದೆ. ಹೊಸ ಕಲ್ಪನೆಗಳು ಹೊಳೆಯುವವು. ಪ್ರತಿಕೂಲ ಪ್ರಸಂಗದಿಂದ ಲಾಭ ಸಂಭವ.

    6. ಕನ್ಯಾ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ಸಹಭಾಗಿ ಆಗುವಿರಿ. ಧಾರ್ಮಿಕ ಕೆಲಸಕ್ಕೆ ವೆಚ್ಚ ಆಗುತ್ತದೆ. ಉತ್ತರಾರ್ಧದಲ್ಲಿ ಮಾನ ಸಮ್ಮಾನಗಳು ಜರುಗುವವು. ಭಾವನಾವೇಗ ತಡೆದುಕೊಳ್ಳಿರಿ. ಆಪೇಕ್ಷೆಯಂತೆ ಲಾಭ ಆಗುವುದು. ಹಟ ಹಿಡಿಯುವಿರಿ.

    7. ತುಲಾ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ದೈಹಿಕ ತೊಂದರೆ ಸಂಭವ, ಉದ್ಯೋಗದಲ್ಲಿ ಪ್ರತಿಕೂಲತೆ ಅರಿವಿಗೆ ಬರುವುದು. ಉತ್ತರಾರ್ಧದಲ್ಲಿ ಸಾಮಾಜಿಕ ಕಾರ್ಯದಲ್ಲಿ ಭಾಗಿ. ಗುರುವಿನ ಕೃಪೆಯಿದೆ. ತಪ್ಪು ಔಷಧದಿಂದ ತೊಂದರೆ. ಪ್ರಾಪಂಚಿಕ ಕಾಳಜಿ ತೆಗದುಕೊಳ್ಳುವಿರಿ.

    8. ವೃಶ್ಚಿಕ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಕೆಲಸದ ನಿಮಿತ್ತ ಪ್ರವಾಸ ಸಾಧ್ಯತೆ. ಕಂಕಣ ಬಲ ಕೂಡಿ ಬರುವುದು. ಅಹಂಕಾರದ ಉದ್ವೇಗದಲ್ಲಿ ಸಿಲುಕುವಿರಿ. ಉತ್ತರಾರ್ಧದಲ್ಲಿ ದೈಹಿಕ ಬೇನೆ ಕಾಣಿಸುವುದು. ಶಿಕ್ಷಣದಲ್ಲಿ ಅಡೆತಡೆಗಳ ಸಾಧ್ಯತೆ. ಉದರದ ನೋವು ಕಾಣುವುದು.

    9. ಧನು ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಸ್ಫರ್ಧಕರನ್ನು ಅರಿಯಲು ಯತ್ನಿಸಿರಿ. ಸಿಕ್ಕ ಅವಕಾಶಗಳನ್ನು ಬಿಡಬೇಡಿರಿ. ಬಹುಮಾನಗಳು ಸಿಗುತ್ತವೆ. ಆರ್ಥಿಕ ಪ್ರಾಪ್ತಿ ಉತ್ತಮವಾಗಿರುತ್ತದೆ. ಸಹೋದರರನ್ನು ದುಃಖಿಸದಿರಿ. ಉತ್ತರಾರ್ಧದಲ್ಲಿ ಪ್ರವಾಸ ಸಾಧ್ಯತೆ.

    10. ಮಕರ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಮನದ ತೊಳಲಾಟ ಆಗುತ್ತಿರುತ್ತದೆ. ಶಿಕ್ಷಣಕ್ಕಿಂತ ಇತರೆ ಹವ್ಯಾಸಗಳ ಕಡೆಗೆ ಒಲವು. ಉತ್ತರಾರ್ಧದಲ್ಲಿ ಕೆಲಸಗಳು ಯಶಸ್ವಿಗೊಳ್ಳುವವು. ಭಾವನಾವೇಗವನ್ನು ನಿಯಂತ್ರಿಸಿರಿ. ಕೌಟುಂಬಿಕ ಖರ್ಚು ಹೆಚ್ಚುವುದು. ಅಪಘಾತ ಸಂಭವಿಸಬಹುದು ಎಚ್ಚರವಹಿಸಿ.

    11. ಕುಂಭ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಇರುವುದು. ಪ್ರಾಪಂಚಿಕ ಸಮಸ್ಯೆಗಳಿರಬಹುದು. ಉತ್ತರಾರ್ಧದಲ್ಲಿ ಧಾರ್ಮಿಕ ಕೆಲಸಗಳಲ್ಲಿ ಗಮನವಿಡುವಿರಿ. ಶೈಕ್ಷಣಿಕ ಪ್ರಗತಿ ಆಗುತ್ತಿರುತ್ತದೆ, ಆದರೆ ನಿರ್ಲಕ್ಷ್ಯ ಮಾಡಿದರೆ ಹಾನಿ. ಕಂಕಣ ಬಲ ಕೂಡಿ ಬರುವುದು.

    12. ಮೀನ ರಾಶಿ

    ಈ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಪೂರ್ವಾರ್ಧದಲ್ಲಿ ಸಕಲ ಕಾರ್ಯಗಳು ಯಶಸ್ವಿ ಆಗುತ್ತದೆ. ಸಹೋದರರು, ನೆರೆಯವರ ಸಂಗಡ ಕಲಹ ತಪ್ಪಿಸಿರಿ. ಕಿವಿನೋವು ಉಂಟಾಗಬಹುದು. ಉತ್ತರಾರ್ಧದಲ್ಲಿ ಪ್ರಾಪಂಚಿಕ ಕಾಳಜಿ ವಹಿಸಿರಿ. ಅಂತಿಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

    ಮಳೆ ಭವಿಷ್ಯ

    ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2025 ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ

    1. ಮೃಗಶಿರ ಮಳೆ

      ಈ ಮಳೆಯು ದಿನಾಂಕ 8/6/2025 ರಂದು ಬೆಳ್ಳಿಗೆ 7.17 ಕ್ಕೆ ನರಿ ವಾಹನದ ಮೇಲೆ ಮೃಗಶಿರ ನಕ್ಷತ್ರದಲ್ಲಿ ಆರಂಭವಾಗುತ್ತದೆ. ಈ ಮಳೆಯು ಇಡೀ ರಾಜ್ಯದಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಸ್ಥಳಗಳಲ್ಲಿ ಸಿಡಿಲು, ಗುಡುಗು, ಮಿಂಚುಗಳ ಆರ್ಭಟ, ಅತಿಯಾದ ಗಾಳಿ ಇರುವುದು. ವಿಶೇಷವಾಗಿ ಕರ್ನಾಟಕದ ಕರಾವಳಿ ತೀರದಲ್ಲಿ ಇವೆಲ್ಲವೂ ನಿಮಗೆ ಕಾಣ ಸಿಗುವ ಸಾಧ್ಯತೆಯಿದೆ.

      2. ಆದ್ರಾ ಮಳೆ

      ಈ ಮಳೆಯು ದಿನಾಂಕ 22/06/2025 ರಂದು ಬೆಳ್ಳಿಗೆ 6.19 ಕ್ಕೆ ಸರಿಯಾಗಿ ಆದ್ರಾ ನಕ್ಷತ್ರದಲ್ಲಿ ಇಲಿ ವಾಹನದೊಂದಿಗೆ ಆರಂಭವಾಗುತ್ತದೆ. ಹಾಗೆ ಈ ಮಳೆಯು ಪಶ್ಚಿಮ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಆಗುವ ಸಂಭವವಿದೆ. ಕೆಲವು ಕಡೆಗೆ ಮಧ್ಯಮ ಸ್ವರೂಪದ ಮಳೆ ಆಗುವ ಸಾಧ್ಯತೆ.

      ಗ್ರಹಣ ವಿಚಾರಗಳು

      ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

      ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲ
      ಚಂದ್ರ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ
      ಸೂರ್ಯ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ

      ಕನ್ನಡ ಕ್ಯಾಲೆಂಡರ್ 2025

      ಮೇ 2025 ಕನ್ನಡ ಕ್ಯಾಲೆಂಡರ್‌

      ಜುಲೈ 2025 ಕನ್ನಡ ಕ್ಯಾಲೆಂಡರ್‌

      Share