November 2025 Calendar Kannada | ನವೆಂಬರ್ 2025 ಕನ್ನಡ ಕ್ಯಾಲೆಂಡರ್‌ holidays in July karnataka november month panchanga kannada

ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ನವೆಂಬರ್ ತಿಂಗಳಿನಲ್ಲಿ ಒಟ್ಟು 30 ದಿನಗಳಿದ್ದು ಹಾಗೆ 5 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ‌ ವಿಶೇಷವಾಗಿ ಕರ್ನಾಟಕ ರಾಜ್ಯೋತ್ಸವವನ್ನು ನೋಡಬಹುದಾಗಿದೆ.

2025 ನವೆಂಬರ್ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ, ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ನವೆಂಬರ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ.

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಭಾನುವಾರ04.30 – 06.0012.00 – 01.3003.00 – 04.30
ಸೋಮವಾರ07.30 – 09.0010.30 – 12.0010.30 – 03.00
ಮಂಗಳವಾರ03.00 – 04.3009.00 – 10.3012.00 – 01.30
ಬುಧವಾರ12.00 – 01.3007.30 – 09.0010.30 – 12.00
ಗುರುವಾರ01.30 – 03.0006.00 – 07.3009.00 – 10.30
ಶುಕ್ರವಾರ10.30 – 12.0003.00 – 04.3007.30 – 09.00
ಶನಿವಾರ09.00 – 10.3001.30 – 03.0006.00 – 07.30

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ನವೆಂಬರ್ವಿವಾಹ ಮುಹೂರ್ತಗಳು22, 23, 25, 26, 27, 30
ನವೆಂಬರ್ವಾಸ್ತು ಶಾಂತಿ ಮುಹೂರ್ತಗಳು1, 3, 7, 10, 15, 26, 27, 28
ನವೆಂಬರ್ಉಪನಯನ ಮೂಹೂರ್ತಇರುವುದಿಲ್ಲ
ನವೆಂಬರ್ಶುಭ ದಿನ1, 3, 4, 7, 9, 10, 12, 13, 15, 16, 23, 25, 26, 27, 29, 30
ನವೆಂಬರ್ಮಧ್ಯಮ ದಿನ5, 24

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
5/11/2025ಬುಧವಾರಗೌರಿ ಹುಣ್ಣಿಮೆ
20/11/2025ಗುರುವಾರಛಟ್ಟಿ ಅಮವಾಸ್ಯೆ

ವಿಶೇಷ ದಿನಗಳು

ದಿನಾಂಕವಾರವಿಶೇಷ ದಿನ
1/11/2025ಶನಿವಾರಕರ್ನಾಟಕ ರಾಜ್ಯೋತ್ಸವ
5/11/2025ಬುಧವಾರಶ್ರೀ ಗುರುನಾನಕ ಜಯಂತಿ
8/11/2025ಶನಿವಾರಸಂಕಷ್ಟ ಚತುರ್ಥಿ, ಕನಕದಾಸ ಜಯಂತಿ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
1/11/2025ಶನಿವಾರಕನ್ನಡ ರಾಜ್ಯೋತ್ಸವ
5/11/2025ಬುಧವಾರಶ್ರೀ ಗುರುನಾನಕ ಜಯಂತಿ
8/11/2025ಶನಿವಾರಕನಕದಾಸ ಜಯಂತಿ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
8/11/2025ಶನಿವಾರ2 ನೇ ಶನಿವಾರ
22/11/2025ಶನಿವಾರ4 ನೇ ಶನಿವಾರ

ಈ ತಿಂಗಳ ರಾಶಿ ಫಲ

1. ಮೇಷ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಉದ್ಯೋಗ ಪ್ರಯುಕ್ತ ಚಿಕ್ಕ ಪ್ರವಾಸ, ಅಹಮ್ಮಿಕೆ ಇರುವುದು. ಉತ್ತರಾರ್ಧದಲ್ಲಿ ತೊಂದರೆಗಳು ಹೆಚ್ಚಾಗುತ್ತವೆ. ಮಂದಿ ಅರಿವಿಗೆ ಬರುತ್ತದೆ. ವಿಳಂಬ, ತೊಂದರೆ, ಅಡಚಣೆ ಅನುಭವಿಸುವಿರಿ. ಕಾನೂನು ವಿಷಯವನ್ನು ನಿಭಾಯಿಸಿರಿ.

2. ವೃಷಭ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಚಾಣಾಕ್ಷತನದಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಕಾರ್ಯಕ್ಷಮತೆ ಕಡಿಮೆ, ಆದರೆ ಒಂದು ಉತ್ತಮ ಅವಕಾಶ ಸಿಗುವುದು. ಉತ್ತರಾರ್ಧದಲ್ಲಿ ಕುಟುಂಬದ ಆರೋಗ್ಯ, ಅಹಮ್ಮಿಕೆ, ಮತ್ತು ಕಲಹದಿಂದ ಅಸ್ಥಿರತೆ ಅನಿಸುವುದು. ಸಮಾಜಮುಖಿ ಆಗಿರುವಿರಿ.

3. ವಿಥುನ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಶಿಕ್ಷಣಕ್ಕಿಂತ ಕಲೆ – ಕ್ರೀಡಾ ಕ್ಷೇತ್ರಗಳಲ್ಲಿ ಅಧಿಕ ಆಸಕ್ತಿಯಿದೆ. ಉತ್ತರಾರ್ಧದಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಮರಗುಳಿತನದಿಂದ ಹಾನಿ ಸಂಭವ. ವಿದೇಶ ಪ್ರವಾಸ ಸಾಧ್ಯತೆ. ಆರ್ಥಿಕ ಪ್ರಾಪ್ತಿ ಉತ್ತಮ. ಪ್ರತಿಕೂಲ ಪ್ರಸಂಗದಿಂದ ಲಾಭ.

4. ಕರ್ಕ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಸಂತೋಷ, ಆಶಾವಾದಿ ಅಗಿರುವಿರಿ. ಕಂಕಣ ಬಲ ಕೂಡಿ ಬರುವುದು, ಭಾಗ್ಯಶಾಲಿ ಅನುಭವಗಳು ಉಂಟಾಗುವವು. ದೈಹಿಕ ತೊಂದರೆ ಕಾಣುವುದು. ಪ್ರಾಪಂಚಿಕ ಕಾಳಜಿ ವಹಿಸುವಿರಿ. ಕಿವಿನೋವು ಕಾಣುವುದು.

5. ಸಿಂಹ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಹೊಸ ಕಾರ್ಯಗಳನ್ನು ಕೈಗೆತ್ತಿಗೊಳ್ಳುವ ಧೈರ್ಯ ಬರುತ್ತದೆ. ಯಶಸ್ಸು ಸಿಗುವುದು. ಉತ್ತರಾರ್ಧದಲ್ಲಿ ಪ್ರಾಪಂಚಿಕ ಕಾಳಜಿ ವಹಿಸುತ್ತೀರಿ. ಕುಶಲತೆ ತೋರುವಿರಿ. ಸ್ವಂತಕ್ಕೆ ಅಧಿಕ ಪ್ರೀತಿ ಹುಟ್ಟುತ್ತದೆ. ವಿದೇಶ ಪ್ರವಾಸ ಸಾಧ್ಯತೆ.

6. ಕನ್ಯಾ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ. ಉತ್ತರಾರ್ಧದಲ್ಲಿ ಸಾಮರ್ಥ್ಯದಿಂದ ಕೆಲಸವನ್ನು ಯಶಸ್ವಿಗೊಳಿಸುವಿರಿ. ಕುಟುಂಬ ಸದಸ್ಯರಿಗೆ ಆರೋಗ್ಯದ ಕಡೆಗೆ ಲಕ್ಷ್ಯವಿರಲಿ, ಗುರುಕೃಪೆ ಇರುವುದು. ಕೋರ್ಟ್‌ ಕಚೇರಿಗಳ ಕಾರ್ಯಗಳು ಆಗುತ್ತವೆ.

7. ತುಲಾ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಪ್ರಕೃತಿ ಒಂದಿಷ್ಟು ಆಕಡೆ ಈಕಡೆ ಆಗುವುದು. ಮಾತುಗಳಿಂದ ಜನರಿಗೆ ನೋವಾಗುವ ಸಾಧ್ಯತೆ, ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ. ಮನ ಬಂದಂತೆ ವರ್ತಿಸುವ ಸಾಧ್ಯತೆ. ಕಾನೂನು ವಿಷಯವನ್ನು ಸಂಭಾಳಿಸಿರಿ.

8. ವೃಶ್ಚಿಕ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಮನಬಂದಂತೆ ವರ್ತನೆ ಸಂಭವ, ಕೋಪಿಷ್ಟ ಆಗುವಿರಿ. ಸ್ವಂತಕ್ಕೆ ಪ್ರೀತಿಸುವಿರಿ. ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ. ಪ್ರಾಪರ್ಟಿಯ ಕೆಲಸಗಳಾಗುತ್ತವೆ. ಭಾವನಾತ್ಮಕ ಕಹಿತನ ಅರಿವಿಗೆ ಬರುತ್ತದೆ.

9. ಧನು ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಜಾಣತನದಿಂದ ಲಾಭ. ಕೆಲಸದಲ್ಲಿ ಯಶಸ್ಸು. ಉತ್ತರಾರ್ಧದಲ್ಲಿ ಖರ್ಚಿನ ಪ್ರಮಾಣ ಹೆಚ್ಚಾಗುತ್ತದೆ, ಆದರೆ ಕೈಹಿಡಿದು ಖರ್ಚು ಮಾಡುವಿರಿ. ದೈಹಿಕ ವ್ಯಾಧಿಯತ್ತ ದುರ್ಲಕ್ಷ್ಯ ಬೇಡ. ಕುಟುಂಬದಲ್ಲಿ ಸಮಸ್ಯೆಗಳು ಉದ್ಭವಿಸುವವು.

10. ಮಕರ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಬಡ್ತಿ ಸಿಗುತ್ತದೆ. ಉದ್ಯೋಗ ಮತ್ತು ಸಕಲ ಕಾರ್ಯಗಳು ಯಶಸ್ಸು ಕಾಣುವವು. ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿಯಲ್ಲಿ ವೃದ್ಧಿಯಾಗುತ್ತದೆ. ಕಲ್ಪನಾ ಶಕ್ತಿ ಉತ್ತಮ. ಕೌಟುಂಬಿಕ ಖರ್ಚು ಹೆಚ್ಚಾಗುತ್ತದೆ. ಪ್ರಾಪರ್ಟಿಯ ಕೆಲಸಗಳು ಆಗುತ್ತವೆ.

11. ಕುಂಭ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಕೆಲಸದ ನಿಮಿತ್ತ ಪ್ರವಾಸ. ಸಾಮಾಜಿಕ ಕಾರ್ಯದಲ್ಲಿ ಭಾಗಿ. ಜೊತೆಗಾರನ ಸಂಗಡ ಸವಿ ಮಾತುಗಳ ಮೂಲಕ ಕೆಲಸ ಮಾಡಿಕೊಳ್ಳಿರಿ. ಕುಶಲತೆಯಿಂದ ಬಡ್ತಿ ಮುಂದಕ್ಕೆ ಹೋಗಬಹುದು. ವಿಳಂಬ, ತೊಂದರೆ, ಅಡಚಣೆ ಅನುಭವಿಸುವಿರಿ.

12. ಮೀನ ರಾಶಿ

ಈ ರಾಶಿಯವರಿಗೆ ನವೆಂಬರ್ ತಿಂಗಳ ಉತ್ತರಾರ್ಧದಲ್ಲಿ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಬಹುದು. ಹೊಸ ಬಟ್ಟೆಗಳು ಸಿಗಬಹುದು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅಭ್ಯಾಸದಲ್ಲಿ ಗಣನೀಯ ಪ್ರಗತಿ ಆಗುತ್ತಿರುತ್ತದೆ. ವಿದೇಶ ಪ್ರವಾಸ ಸಾಧ್ಯತೆ. ಗುರುಕೃಪೆ ಇರುವುದು.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2025ರ ನವೆಂಬರ್ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ.

1. ವಿಶಾಖ ಮಳೆ

ಈ ಮಳೆಯು ದಿನಾಂಕ 6/11/2025ರಂದು ರಾತ್ರಿ 2.48 ಕ್ಕೆ ಎಮ್ಮೆ ವಾಹನದ ಮೇಲೆ ವಿಶಾಖ ನಕ್ಷತ್ರದಲ್ಲಿ ಆರಂಭವಾಗುತ್ತದೆ. ಹಾಗೆ ಈ ಮಳೆಯು ಸಾಧಾರಣ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲ
ಚಂದ್ರ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ
ಸೂರ್ಯ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ

ಕನ್ನಡ ಕ್ಯಾಲೆಂಡರ್ 2025

ಅಕ್ಟೋಬರ್ 2025 ಕನ್ನಡ ಕ್ಯಾಲೆಂಡರ್‌

‌ಡಿಸೆಂಬರ್ 2025 ಕನ್ನಡ ಕ್ಯಾಲೆಂಡರ್‌

Share