Kannada Calendar October 2025ಅಕ್ಟೋಬರ್ 2025 ಕನ್ನಡ ಕ್ಯಾಲೆಂಡರ್ holidays in october month panchanga calendar kannada
ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 30 ದಿನಗಳಿದ್ದು ಹಾಗೆ 4 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಬಹಳ ಆಡಂಬರವಾಗಿ ಅತೀ ದೊಡ್ಡದಾಗಿ ಆಚರಿಸುವ ನಾಡ ಹಬ್ಬ ಎಂದೇ ಪ್ರಸಿದ್ದಿಯಾದ ದಸರಾ ಹಬ್ಬ ಮತ್ತು ದೀಪಾವಳಿ ಎರಡು ಹಬ್ಬಗಳನ್ನ ನೋಡಬಹುದು.

2025 ಅಕ್ಟೋಬರ್‌ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು, ತಿಂಗಳು ಮಾಸ, ರಾಶಿ ಭವಿಷ್ಯ, ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.
ಅಕ್ಟೋಬರ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ
ನಮ್ಮ ಈ ಕನ್ನಡ ಕ್ಯಾಲೆಂಡರ್‌ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ.
ವಾರದ ಹೆಸರು | ರಾಹು ಕಾಲ | ಗುಳಿ ಕಾಲ | ಯಮಗಂಡ ಕಾಲ |
---|---|---|---|
ಭಾನುವಾರ | 04.30 – 06.00 | 12.00 – 01.30 | 03.00 – 04.30 |
ಸೋಮವಾರ | 07.30 – 09.00 | 10.30 – 12.00 | 10.30 – 03.00 |
ಮಂಗಳವಾರ | 03.00 – 04.30 | 09.00 – 10.30 | 12.00 – 01.30 |
ಬುಧವಾರ | 12.00 – 01.30 | 07.30 – 09.00 | 10.30 – 12.00 |
ಗುರುವಾರ | 01.30 – 03.00 | 06.00 – 07.30 | 09.00 – 10.30 |
ಶುಕ್ರವಾರ | 10.30 – 12.00 | 03.00 – 04.30 | 07.30 – 09.00 |
ಶನಿವಾರ | 09.00 – 10.30 | 01.30 – 03.00 | 06.00 – 07.30 |
ಶುಭ ಕಾರ್ಯಗಳಿಗೆ ಉತ್ತಮ ದಿನಗಳು
ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಂಖಾಂತರ ತಿಳಿಯಬಹುದಾಗಿದೆ.
ತಿಂಗಳು | ಶುಭ ಮುಹೂರ್ತದ ಹೆಸರು | ದಿನಾಂಕ |
---|---|---|
ಅಕ್ಟೋಬರ್ | ವಿವಾಹ ಮುಹೂರ್ತಗಳು | ಇರುವುದಿಲ್ಲ |
ಅಕ್ಟೋಬರ್ | ವಾಸ್ತು ಶಾಂತಿ ಮುಹೂರ್ತಗಳು | 24, 31 |
ಅಕ್ಟೋಬರ್ | ಉಪನಯನ ಮೂಹೂರ್ತ | ಇರುವುದಿಲ್ಲ |
ಅಕ್ಟೋಬರ್ | ಶುಭ ದಿನ | 1, 4, 5, 8, 13, 14, 15, 17, 22, 24, 28, 30, 31 |
ಅಕ್ಟೋಬರ್ | ಮಧ್ಯಮ ದಿನ | 3, 6, 9, 25, 29 |
ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ
ದಿನಾಂಕ | ವಾರ | ಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು |
---|---|---|
7/10/2025 | ಮಂಗಳವಾರ | ಶೀಗಿ ಹುಣ್ಣಿಮೆ |
21/10/2025 | ಮಂಗಳವಾರ | ದೀಪಾವಳಿ ಅಮವಾಸ್ಯೆ |
ವಿಶೇಷ ದಿನಗಳು
ದಿನಾಂಕ | ವಾರ | ವಿಶೇಷ ದಿನ |
---|---|---|
2/10/2025 | ಗುರುವಾರ | ಗಾಂಧಿ ಜಯಂತಿ, ವಿಜಯದಶಮಿ ದಸರಾ |
7/10/2025 | ಮಂಗಳವಾರ | ವಾಲ್ಮೀಕಿ ಜಯಂತಿ |
10/10/2025 | ಶುಕ್ರವಾರ | ಸಂಕಷ್ಟ ಚತುರ್ಥಿ |
21/10/2025 | ಮಂಗಳವಾರ | ಶ್ರೀ ಲಕ್ಷ್ಮೀ – ಕುಬೇರ ಪೂಜೆ |
22/10/2025 | ಬುಧವಾರ | ದೀಪಾವಳಿ ಪಾಡ್ಯ |
ಸರ್ಕಾರಿ ರಜಾ ದಿನಗಳು
ದಿನಾಂಕ | ವಾರ | ವಿಷಯ |
---|---|---|
2/10/2025 | ಗುರುವಾರ | ಗಾಂಧಿ ಜಯಂತಿ, ವಿಜಯದಶಮಿ ದಸರಾ |
7/10/2025 | ಮಂಗಳವಾರ | ವಾಲ್ಮೀಕಿ ಜಯಂತಿ |
21/10/2025 | ಮಂಗಳವಾರ | ಶ್ರೀ ಲಕ್ಷ್ಮೀ – ಕುಬೇರ ಪೂಜೆ |
22/10/2025 | ಬುಧವಾರ | ದೀಪಾವಳಿ ಪಾಡ್ಯ |
ಬ್ಯಾಂಕ್ ರಜಾ ದಿನಗಳು
ದಿನಾಂಕ | ವಾರ | ರಜೆಯ ಕಾರಣ |
---|---|---|
11/10/2025 | ಶನಿವಾರ | 2 ನೇ ಶನಿವಾರ |
25/10/2025 | ಶನಿವಾರ | 4 ನೇ ಶನಿವಾರ |
ಈ ತಿಂಗಳ ರಾಶಿ ಫಲ
1. ಮೇಷ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಪೂರ್ವಾರ್ಧದಲ್ಲಿ ಕೆಲಸಗಳು ಆಗುತ್ತವೆ, ಆದರೆ ಸ್ಪರ್ಧಕರ ಊಹೆ ಅರ್ಥ ಮಾಡಿಕೊಳ್ಳಿರಿ. ಉತ್ತರಾರ್ಧದಲ್ಲಿ ಅಹಂಕಾರ ಸುಖಕ್ಕೆ ಅಡ್ಡಿಯಾಗಬಹುದು. ಅಂತಿಮ ಕೆಲಸದಲ್ಲಿ ಯಶಸ್ಸು ಸಾಧ್ಯ, ವಿಳಂಬ, ತೊಂದರೆ, ಅಡಚಣೆ ಅನುಭವಿಸುವಿರಿ.
2. ವೃಷಭ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಮನದ ತೊಳಲಾಟ, ಶಿಕ್ಷಣದ ಕಡೆಗೆ ಕಡಿಮೆ ಗಮನ, ಉತ್ತರಾರ್ಧದಲ್ಲಿ ಕೆಲಸಗಳಿಗೆ ಯಶಸ್ಸು ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಕೌಟುಂಬಿಕ ಖರ್ಚು ಹೆಚ್ಚಾಗುತ್ತದೆ. ಪ್ರತಿಕೂಲ ಘಟನೆಯಿಂದ ಲಾಭ. ಆರ್ಥಿಕ ಪ್ರಾಪ್ತಿ ಸಾಧಾರಣ.
3. ವಿಥುನ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಪ್ರಾಪಂಚಿಕ ಕಾಳಜಿ ಇರುತ್ತದೆ. ವಾಹನ ಸುಖದ ಪ್ರವಾಸ, ಉತ್ತರಾರ್ಧದಲ್ಲಿ ಮನದ ತೊಳಲಾಟ. ಕಂಕಣ ಬಲ ಕೂಡಿ ಬಂದರೆ ಸುಂದರ ಸ್ಥಳ ಸಿಗುತ್ತದೆ. ಸರಕಾರಿ ಕೆಲಸದ ಹಣ ಸಿಗುತ್ತದೆ. ಉದರ ಸಮಸ್ಯೆಗಳು, ಕಾನೂನು ವಿಷಯವನ್ನು ನಿಭಾಯಿಸಿರಿ.
4. ಕರ್ಕ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಮಹಾತ್ವಾಂಕ್ಷಿ, ಆಶಾವಾದಿ, ಸಂತೋಷದಿಂದ ಇರುತ್ತೀರಿ. ಯಶಸ್ಸು ಸಿಗುತ್ತದೆ. ಉತ್ತರಾರ್ಧದಲ್ಲಿ ಪ್ರಾಪಂಚಿಕ ಕಾಳಜಿ ಇರುತ್ತದೆ. ಕಲೆ – ಕ್ರೀಡೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಿರಿ. ಕೆಲಸದಲ್ಲಿ ಕಲಾತ್ಮಕತೆ ಕಾಯ್ದುಕೊಳ್ಳುವಿರಿ.
5. ಸಿಂಹ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ. ಕುಟುಂಬದಲ್ಲಿ ತಿಳುವಳಿಕೆಯ ಅಭಾವ, ಸಮಾಜಮುಖಿ ಆಗಿರುವಿರಿ. ಉತ್ತರಾರ್ಧದಲ್ಲಿ ಕೆಲಸಗಳು ಯಶಸ್ವಿ ಆಗುತ್ತವೆ. ಆಧ್ಯಾತ್ಮಿಕ ಪ್ರಗತಿ ಆಗುವುದು. ವಿಳಂಬ, ತೊಂದರೆ, ಅಡಚಣೆ ಅನುಭವಿಸುವಿರಿ.
6. ಕನ್ಯಾ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಸ್ವಭಾವ ಕೋಪಿಷ್ಟ ಆಗುವುದು. ಹೆಚ್ಚು ಖರ್ಚು ಮಾಡುವವ ಅನಿಸಿಕೊಳ್ಳುವಿರಿ. ಕುಟುಂಬದಲ್ಲಿ ಮನಸ್ಸಿಗೆ ಬಂದಂತೆ ವರ್ತಿಸುವಿರಿ. ಉದ್ಯೋಗದಲ್ಲಿ ಜಾಗರೂಕತೆ ಇರಲಿ. ಶೈಕ್ಷಣಿಕ ಪ್ರಗತಿ ಆಗುತ್ತದೆ. ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ.
7. ತುಲಾ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ದೊಡ್ಡ ಪ್ರಮಾಣದ ವೆಚ್ಚ ಸಾಧ್ಯ, ಮೋಜು ಮಾಡುವಿರಿ. ಉದ್ಯೋಗದಲ್ಲಿ ಮಂದಿ ಕಾಣುವುದು. ಉತ್ತರಾರ್ಧದಲ್ಲಿ ಉದ್ಯೋಗಕ್ಕೆ ಚಾಲನೆ ಸಿಗುತ್ತದೆ. ಜಾಮೀನು ಆಗಬೇಡಿರಿ. ಗುಣಮಟ್ಟ ಹೆಚ್ಚಿಸಿರಿ. ತಪ್ಪು ಔಷಧ ಸೇವನೆಯಿಂದ ಆರೋಗ್ಯ ಕೆಡುವುದು.
8. ವೃಶ್ಚಿಕ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಆರ್ಥಿಕ ಲಾಭ ಉಂಟು, ಕಂಕಣ ಬಲ ಕೂಡಿದರೆ ಶ್ರೀಮಂತ ಸ್ಥಳ ಸಿಗುತ್ತದೆ. ಮಹಾತ್ವಾಕಾಂಕ್ಷಿ ಆಗಿರುವಿರಿ, ಆದರೆ ಮಾತುಗಳಿಂದ ಹಾನಿ ಸಂಭವ. ಭಾವನಾತ್ಮಕ ಒಣ ಜಗಳಗಳಲ್ಲಿ ಸಿಲುಕಬೇಡಿರಿ. ಚಿನ್ನಾಭರಣ ಖರೀದಿಸುವಿರಿ.
9. ಧನು ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಅಧಿಕಾರ ವ್ಯವಸ್ಥಿತ ನಡೆಯುವುದಿಲ್ಲ. ಆರ್ಥಿಕ ಪ್ರಾಪ್ತಿ ಆಗುತ್ತದೆ. ಉತ್ತರಾರ್ಧದಲ್ಲಿ ಮಿತ್ರರಿಗಾಗಿ ಖರ್ಚು ಮಾಡುತ್ತೀರಿ. ಉದ್ಯೋಗದಲ್ಲಿ ಸ್ಪರ್ಧೆಯ ಭೀತಿ ಇರುವುದು. ವಿವೇಕ ಬುದ್ದಿ ಜಾಗೃತಿ ಇರಲಿ. ವಿಳಂಬ, ತೊಂದರೆ, ಅಡಚಣೆ ಅನುಭವಿಸುವಿರಿ.
10. ಮಕರ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಹೊಸ ಬಟ್ಟೆಗಳು ಸಿಗಬಹುದು. ಮಾನ ಸನ್ಮಾನಗಳು ಜರುಗುವವು. ಬಹುಮಾನಗಳು ಸಿಗುತ್ತವೆ. ಪ್ರಯತ್ನ ಕೊಂಚ ಕಡಿಮೆಯಾದರೂ ಮೇಲಿನ ಸ್ಥಾನ ಸಿಗುವುದು. ಪ್ರತಿಕೂಲ ಪ್ರಸಂಗದಿಂದ ಲಾಭ ಸಂಭವ.
11. ಕುಂಭ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಉದ್ಯೋಗದಲ್ಲಿ ಮಂದಿ, ಅಗ್ಗದ ವಾತಾವರಣ, ಅಚಾನಕ್ಕಾಗಿ ಧನಲಾಭ ಸಂಭವ, ವೆಚ್ಚ ಹೆಚ್ಚು ಅಗಬಹುದು. ಉತ್ತರಾರ್ಧದಲ್ಲಿ ಕೆಲಸಕ್ಕೆಂದು ಪ್ರವಾಸ ಸಾಧ್ಯತೆ. ಸಾಮಾಜಿಕ ಕಾರ್ಯಗಳಲ್ಲಿ ಸಹಭಾಗಿ. ಕೃಷಿ ಕೆಲಸಗಳು ಆಗುವವು.
12. ಮೀನ ರಾಶಿ
ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಅಹಂಕಾರ ಸುಖಕ್ಕೆ ಅಡ್ಡಿಯಾಗಬಹುದು. ಕೆಲಸಕ್ಕಾಗಿ ಪ್ರಯಾಣ ಮಾಡುವಿರಿ. ಭಾಗ್ಯಕಾರಕ ಅನುಭವ ಪಡೆಯುವಿರಿ. ವಿವೇಕ ಬುದ್ದಿ ಜಾಗೃತವಾಗಿಡಿ. ವಿಳಂಬ, ತೊಂದರೆ, ಅಡಚಣೆ ಅನುಭವಿಸುವಿರಿ. ಕಾನೂನು ಬಾಬತ್ತನ್ನು ಸಂಭಾಳಿಸಿರಿ.
ಮಳೆ ಭವಿಷ್ಯ
ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಖಾಂತರ ನೀವು 2025 ರ ಅಕ್ಟೋಬರ್ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ.
1. ಚಿತ್ತಾ ಮಳೆ
ಈ ಮಳೆಯು ದಿನಾಂಕ 11/10/2025 ರಂದು ಬೆಳಿಗ್ಗೆ 11.38 ಕ್ಕೆ ಆನೆ ವಾಹನದ ಮೇಲೆ ಚಿತ್ತಾ ನಕ್ಷತ್ರದಲ್ಲಿ ಆರಂಭವಾಗುತ್ತದೆ. ಈ ನಕ್ಷತ್ರದ ಮಳೆ ಅತ್ಯಂತ ಕಡಿಮೆಯಾಗುವ ಸಾಧ್ಯತೆಯಿದೆ. ಗ್ರಹಯೋಗ ಮತ್ತು ಗೋಚರ ಗ್ರಹವನ್ನು ತೋರಿಸುತ್ತಿದೆ. ವಿಶೇಷವಾಗಿ ಈ ನಕ್ಷತ್ರದಲ್ಲಿ ಭೀಕರ ಸಂಕಟವು ಎದುರಿಸಬೇಕಾಗಬಹುದು. ಅನಿಯಮಿತ ಮಳೆ ಬೀಳಬಹುದು. 11 ರಿಂದ 14 ಮತ್ತು ಅಕ್ಟೋಬರ್ 16 ರಿಂದ 21 ರವರೆಗೆ ಮಧ್ಯಮ ಮಳೆ ಬೀಳಬಹುದು.
2. ಸ್ವಾತಿ ಮಳೆ
ಈ ಮಳೆಯು ದಿನಾಂಕ 24/10/2025 ರಂದು ರಾತ್ರಿ 8.11 ಕ್ಕೆ ಸರಿಯಾಗ ಕರ್ಕ ಲಗ್ನದಲ್ಲಿ ಸ್ವಾತಿ ನಕ್ಷತ್ರದೊಂದಿಗೆ ಆರಂಭವಾಗುತ್ತದೆ. ಈ ನಕ್ಷತ್ರದಲ್ಲಿ ಉತ್ತಮ ರೀತಿಯ ಮಳೆ ಬೀಳುವುದು. ಆದರೆ ಕಡೆ ಮಹಾಪೂರ ಬರುವುದು. ಪಶ್ಚಿಮ ಮತ್ತು ದಕ್ಷಿಣ ಕರ್ನಾಟಕದಲ್ಲಿ ಈ ಮಳೆಯ ಪ್ರಮಾಣವು ಅತ್ಯಂತ ಕಡಿಮೆಯಾಗಿರುವುದು. ಪೂರ್ವ ಮತ್ತು ಉತ್ತರ ಕರ್ನಾಟಕದಲ್ಲಿ ಮಾತ್ರ ಮಳೆಯ ಪ್ರಮಾಣವು ಹೆಚ್ಚಾಗಿರುವುದು. 25 ರಿಂದ 28 ಮತ್ತು 2 ರಿಂದ 3 ರ ಸಮಯದಲ್ಲಿ ಮಳೆ ಬೀಳುವ ಸಂಭವವಿದೆ.
ಗ್ರಹಣ ವಿಚಾರಗಳು
ನಮ್ಮ ಈ ಕನ್ನಡ ಕ್ಯಾಲೆಂಡರ್ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ
ಗ್ರಹಣದ ಹೆಸರು | ದಿನಾಂಕ | ವಾರ | ಗ್ರಹಣ ಆರಂಭ ಕಾಲ | ಗ್ರಹಣ ಮೋಕ್ಷ ಕಾಲ |
---|---|---|---|---|
ಚಂದ್ರ ಗ್ರಹಣ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ |
ಸೂರ್ಯ ಗ್ರಹಣ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ |