March 2025 Kannada Calendar Pdf Free Download ಮಾರ್ಚ್ month 2025 ಕನ್ನಡ ಕ್ಯಾಲೆಂಡರ್‌

ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ತಿಂಗಳು ಅತ್ಯಂತ ವಿಶೇಷವಾಗಿದ್ದು ಈ‌ ಮಾರ್ಚ್ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಒಟ್ಟು 5 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಯುಗಾದಿ ಹಬ್ಬ ಬರಲಿದ್ದು ಬರಲಿದೆ ಹಾಗೆ ಈ ತಿಂಗಳಿನಲ್ಲಿ ವಿಶೇಷವಾಗಿ ಹಿಂದೂಗಳಿಗೆ ಹೊಸ ವರ್ಷವಾದ ಈ ಯುಗಾದಿ ಹಬ್ಬ ಬರಲಿದೆ.

March 2025 Kannada Calendar

2025 ಮಾರ್ಚ್ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳಿನಲ್ಲಿ ನಿಮ್ಮ ರಾಶಿಯ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಮಾರ್ಚ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಭಾನುವಾರ04.30 – 06.0012.00 – 01.3003.00 – 04.30
ಸೋಮವಾರ07.30 – 09.0010.30 – 12.0010.30 – 03.00
ಮಂಗಳವಾರ03.00 – 04.3009.00 – 10.3012.00 – 01.30
ಬುಧವಾರ12.00 – 01.3007.30 – 09.0010.30 – 12.00
ಗುರುವಾರ01.30 – 03.0006.00 – 07.3009.00 – 10.30
ಶುಕ್ರವಾರ10.30 – 12.0003.00 – 04.3007.30 – 09.00
ಶನಿವಾರ09.00 – 10.3001.30 – 03.0006.00 – 07.30

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಮಾರ್ಚ್ವಿವಾಹ ಮುಹೂರ್ತಗಳು1, 2, 3, 6, 7, 12, 15, 25, 26
ಮಾರ್ಚ್ವಾಸ್ತು ಶಾಂತಿ ಮುಹೂರ್ತಗಳು1, 6, 7, 10, 15, 26
ಮಾರ್ಚ್ಉಪನಯನ ಮುಹೂರ್ತಗಳು9, 10
ಮಾರ್ಚ್ಶುಭ ದಿನ 1, 2, 4, 7, 8, 9, 10, 11, 12, 18, 20, 23, 25, 26, 30
ಮಾರ್ಚ್ಮಧ್ಯಮ ದಿನ3, 6, 13, 19, 22

ಮಾರ್ಚ್ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
14/3/2025ಶುಕ್ರವಾರಹೋಳಿ ಹುಣ್ಣಿಮೆ
29/3/2025ಶನಿವಾರಯುಗಾದಿ ಅಮವಾಸ್ಯೆ

ಮಾರ್ಚ್ ತಿಂಗಳ ವಿಶೇಷ ದಿನಗಳು

ದಿನಾಂಕವಾರವಿಶೇಷ ದಿನ
17/3/2025ಸೋಮವಾರಸಂಕಷ್ಟ ಚತುರ್ಥಿ
30/3/2025ಭಾನುವಾರಚಾಂದ್ರಾಮಾನ ಯುಗಾದಿ
31/3/2025ಸೋಮವಾರ ರಂಜಾನ್

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
30/3/2025ಭಾನುವಾರಚಾಂದ್ರಾಮಾನ ಯುಗಾದಿ
31/3/2025ಸೋಮವಾರ ರಂಜಾನ್

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
8/3/2025ಶನಿವಾರ2 ನೇ ಶನಿವಾರ
22/3/2025ಶನಿವಾರ4 ನೇ ಶನಿವಾರ

ಮಾರ್ಚ್ ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಉತ್ತಮ ಆರ್ಥಿಕ ಪ್ರಾಪ್ತಿ, ಉತ್ತರಾರ್ಧದಲ್ಲಿ ಅನೇಕ ಮಾರ್ಗಗಳ ಮೂಲಕ ವೆಚ್ಚ ಸಾಧ್ಯತೆ. ಕಾನೂನಿನ ವಿಚಾರದಲ್ಲಿ ತೊಂದರೆಗೆ ಈಡಾಗುತ್ತೀರಿ. ಯಾರಿಗೂ ಜಾಮೀನುದಾರರಾಗಬೇಡಿ, ಸಾಹಸ ಮಾಡಬೇಡಿರಿ, ವಿದ್ಯೆಯಲ್ಲಿ ಅಯಶಸ್ಸು ಸಂಭವ.

2. ವೃಷಭ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಸನ್ಮಾನಗಳು ಜರುಗುವವು, ಬಹುಮಾರ್ಗಗಳಿಂದ ಆರ್ಥಿಕ ಪ್ರಾಪ್ತಿ. ಗೆಳೆಯರ ತಪ್ಪು ಗ್ರಹಿಕೆ ಸಾಧ್ಯತೆ. ವಿದೇಶಿ ಪ್ರವಾಸ ಹಾಗೆಯೇ ದೂರದ ಪ್ರವಾಸ ಸಾಧ್ಯತೆ. ಹೋಸ ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ಅಣ್ಣನಿಗೆ ತೊಂದರೆ ಉಂಟಾಗಬಹುದು.

3. ವಿಥುನ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಉದ್ಯೋಗದಲ್ಲಿ ಯೋಚಿಸಿ ಹೂಡಿಕೆ ಮಾಡಿರಿ. ವಿದೇಶಿ ಪ್ರವಾಸದ ಅವಕಾಶವಿದೆ. ಮನಬಂದಂತೆ ವರ್ತಿಸಿವಿರಿ. ಕೆಲಸ ಕಾರ್ಯಗಳಿಗೆ ದೈವದ ಬೆಂಬಲವಿದೆ. ನಿಮ್ಮಲ್ಲಿರುವ ಸಿಟ್ಟನ್ನು ತಡೆದುಕೊಳ್ಳಿ

4. ಕರ್ಕ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಆರ್ಥಿಕ ಲಾಭವಿದೆ. ಖಾಯಂ ನೌಕರಿ ಸಿಗುತ್ತದೆ. ಕಾನೂನು ವಿಷಯವನ್ನು ನಿಭಾಯಿಸುವಿರಿ. ಕೆಲಸದಲ್ಲಿ ವಿಳಂಬ, ಆಡಚಣೆ, ತೊಂದರೆ, ಅನುಭವಿಸುವಿರಿ. ದೈವದ ಬಲ ಗಟ್ಟಿಯಾಗಿದೆ, ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗುವಿರಿ.

5. ಸಿಂಹ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಆರೋಗ್ಯದ ಬಗ್ಗೆ ಗಮವಿರಲಿ. ಪ್ರತಿಕೂಲ ಪ್ರಸಂಗ ಮತ್ತು ಸಾಮಾಜಿಕ ಕಾರ್ಯದಿಂದ ಧನಲಾಭ ಸಂಭವ, ಪ್ರಾಪರ್ಟಿಯ ಕೆಲಸಗಳಾಗುವವು. ಕೌಟುಂಬಿಕ ವೆಚ್ಚ ವ್ಯರ್ಥವಾಗುತ್ತದೆ. ನಿಮ್ಮ ಸಿಟ್ಟನ್ನು ತಡೆದಿಟ್ಟುಕೊಳ್ಳಿ.

6. ಕನ್ಯಾ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ವಿದೇಶಿ ಪ್ರವಾಸಗಳ ಸಾಧ್ಯತೆ. ಶೈಕ್ಷಣಿಕ ಪ್ರಗತಿ ಆಗಲಿದೆ. ಗುರು ಸಮಾನರಾದ ವ್ಯಕ್ತಿಯ ಭೇಟಿ. ಪೂರ್ವಾರ್ಧದಲ್ಲಿ ಮಹತ್ವದ ಕಾರ್ಯಗಳಾಗುವವು. ಮರೆಗುಳಿತನ ಅರಿವಿಗೆ ಬರುವುದು. ಪೂರ್ವಾಗ್ರಹ ಪೀಡಿತರಾಗುವಿರಿ.

7. ತುಲಾ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಎಲ್ಲಾ ಕಡೆಗಳಿಂದ ಅಡೆತಡೆಗಳು. ಪೂರ್ವಾರ್ಧದಲ್ಲಿ ವಿದ್ಯೆಯಲ್ಲಿ ಯಶಸ್ಸು ಲಭಿಸುವುದಿಲ್ಲ. ದೈಹಿಕ ತೊಂದರೆಗಳನ್ನು ನಿರ್ಲಕ್ಷ್ಯ ಮಾಡಬೇಡಿರಿ. ಪ್ರತಿಕೂಲ ಪ್ರಸಂಗದಿಂದ ಲಾಭ. ತುಂಬಾನೆ ಹಟವಾದಿ ಆಗುತ್ತೀರಿ.

8. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ತಂದೆ-ತಾಯಿಯರಿಗೆ ತೊಂದರೆಗಳು ಸಂಭವಿಸಬಹುದು. ಉತ್ತರಾರ್ಧದಲ್ಲಿ ಶೈಕ್ಷಣಿಕ ವಿಷಯದಲ್ಲಿ ಹೆಚ್ಚು ಲಕ್ಷ್ಯವಿರಲಿ. ಕಲೆ, ಬೌದ್ಧಿಕ ಕ್ಷೇತ್ರದಲ್ಲಿ ಪ್ರಗತಿ. ಆರ್ಥಿಕ ಪ್ರಾಪ್ತಿ ಉತ್ತಮ. ಕಾನೂನು ಬಾಬತ್ತನ್ನು ನಿಭಾಯಿಸಿರಿ.

9. ಧನು ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಪೂರ್ವಾರ್ಧದಲ್ಲಿ ಕೆಲಸಗಳಿಗೆ ಯಶಸ್ಸು ಸಾಧ್ಯತೆ. ಗೌರವಗಳು ಪ್ರಾಪ್ತಿ. ಸಹೋದರರಲ್ಲಿ ಕಲಹ, ಗೃಹ ಸುಖ ಶಾಂತಿ ಕಡಿಮೆಯಾಗಲಿದೆ. ಪ್ರಾಪರ್ಟಿಯ ಕೆಲಸದಲ್ಲಿ ಅಡ್ಡಿ. ಉತ್ತರಾರ್ಧದಲ್ಲಿ ಕೌಟುಂಬಿಕ ಖರ್ಚು ಅಧಿಕ.

10. ಮಕರ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಪೂರ್ವಾರ್ಧದಲ್ಲಿ ಅಡ್ಡಿಗಳು, ಆರ್ಥಿಕ ಪ್ರಾಪ್ತಿ ಸಾಧಾರಣ. ಉತ್ತರಾರ್ಧದಲ್ಲಿ ಸಂಘರ್ಷ ಮೂಲಕ ಯಶಸ್ಸು ಸಾಧ್ಯ. ಶೈಕ್ಷಣಿಕ ಪ್ರಗತಿ ಆಗುತ್ತ ಇರುತ್ತದೆ. ಆರೋಗ್ಯದಲ್ಲಿ ಸುಧಾರಣೆ. ಚಿನ್ನಾಭರಣಗಳನ್ನು ಖರೀದಿಸುವಿರಿ.

11. ಕುಂಭ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಆರ್ಥಿಕ ಪ್ರಾಪ್ತಿಯಲ್ಲಿ ಅಡೆತಡೆಗಳು ಬರಬಹುದು. ತಂದೆ-ತಾಯಿಯರ ಮತ್ತು ಸ್ವಂತ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಕಣ್ಣು ನೋವು ಕಾಣಿಸಿಕೊಳ್ಳುತ್ತದೆ. ಕುಟುಂಬದಲ್ಲಿ ತಪ್ಪು ಗ್ರಹಿಕೆ ಸಂಭವ, ಇತರರನ್ನು ದು:ಖಿಸಬೇಡಿರಿ.

12. ಮೀನ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಮಾನಸಿಕ ಸಂತುಲನ ಅಗತ್ಯ, ಪೂರ್ವಾರ್ಧದಲ್ಲಿ ವೆಚ್ಚ ಹೆಚ್ಚು, ಕಾನೂನು ವಿಷಯದಲ್ಲಿ ಲಕ್ಷ್ಯ ಇಡಬೇಕು. ಉತ್ತಾರಾರ್ಧದಲ್ಲಿ ಅಹಮ್ಮಿಕೆ ಅಧಿಕ. ಚೇಷ್ಟೆ, ತಮಾಷೆ ಮೈಮೇಲೆ ಬರುವ ಸಂಭವ, ಹತ್ತಿರದ ವ್ಯಕ್ತಿಯ ವಿರಹ ಭಾಸವಾಗುತ್ತದೆ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2025 ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ಮಾರ್ಚ್ ತಿಂಗಳಲ್ಲಿ ಮಳೆಗಾಲ ಇರುವುದಿಲ್ಲ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲ
ಚಂದ್ರ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ
ಸೂರ್ಯ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ

ಕನ್ನಡ ಕ್ಯಾಲೆಂಡರ್ 2025

ಫೆಬ್ರವರಿ 2025 ಕನ್ನಡ ಕ್ಯಾಲೆಂಡರ್‌

ಏಪ್ರಿಲ್‌ 2025 ಕನ್ನಡ ಕ್ಯಾಲೆಂಡರ್‌

Share