May 2025 Calendar Kannada Pdf Free Download panchanga May month with festival holidays ಮೇ 2025 ಕನ್ನಡ ಕ್ಯಾಲೆಂಡರ್
ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ತಿಂಗಳು ಅತ್ಯಂತ ವಿಶೇಷವಾಗಿದ್ದು ಈ ಮೇ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಹಾಗೆ 4 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಕಾರ್ಮಿಕರ ದಿನಾಚರಣೆ ಮತ್ತು ಬುದ್ದ ಪೂರ್ಣಿಮಾ ಬರಲಿವೆ ಹಾಗೆ ಈ ತಿಂಗಳಿನಲ್ಲಿ ವಿಶೇಷವಾಗಿ ಈ ತಿಂಗಳಿನಿಂದ ಮಳೆಗಾಲ ಋತು ಆರಂಭವಾಗಲಿದೆ.

2025ರ ಮೇ ನಲ್ಲಿ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರು ನಿಮ್ಮ ಉತ್ತಮ ಭವಿಷ್ಯವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.
ಮೇ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ
ನಮ್ಮ ಈ ಕನ್ನಡ ಕ್ಯಾಲೆಂಡರ್ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ
ವಾರದ ಹೆಸರು | ರಾಹು ಕಾಲ | ಗುಳಿ ಕಾಲ | ಯಮಗಂಡ ಕಾಲ |
---|---|---|---|
ಭಾನುವಾರ | 04.30 – 06.00 | 12.00 – 01.30 | 03.00 – 04.30 |
ಸೋಮವಾರ | 07.30 – 09.00 | 10.30 – 12.00 | 10.30 – 03.00 |
ಮಂಗಳವಾರ | 03.00 – 04.30 | 09.00 – 10.30 | 12.00 – 01.30 |
ಬುಧವಾರ | 12.00 – 01.30 | 07.30 – 09.00 | 10.30 – 12.00 |
ಗುರುವಾರ | 01.30 – 03.00 | 06.00 – 07.30 | 09.00 – 10.30 |
ಶುಕ್ರವಾರ | 10.30 – 12.00 | 03.00 – 04.30 | 07.30 – 09.00 |
ಶನಿವಾರ | 09.00 – 10.30 | 01.30 – 03.00 | 06.00 – 07.30 |
ಶುಭ ಕಾರ್ಯಗಳಿಗೆ ಉತ್ತಮ ದಿನಗಳು
ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಂಖಾಂತರ ತಿಳಿಯಬಹುದಾಗಿದೆ
ತಿಂಗಳು | ಶುಭ ಮುಹೂರ್ತದ ಹೆಸರು | ದಿನಾಂಕ |
---|---|---|
ಮೇ | ವಿವಾಹ ಮುಹೂರ್ತಗಳು | 1, 5, 6, 7, 8, 9, 10, 13, 14, 16, 17, 20, 23, 24 |
ಮೇ | ವಾಸ್ತು ಶಾಂತಿ ಮುಹೂರ್ತಗಳು | 2, 3, 8, 9, 10, 14, 23, 24, 28 |
ಮೇ | ಉಪನಯನ ಮೂಹೂರ್ತ | 1, 2, 7, 14, 29 |
ಮೇ | ಶುಭ ದಿನ | 2, 3, 5, 6, 7, 9, 10, 13, 16, 17, 20, 23, 24, 28, 29, 31 |
ಮೇ | ಮಧ್ಯಮ ದಿನ | 11, 15, 18, 19, 25, 26, 27 |
ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ
ದಿನಾಂಕ | ವಾರ | ಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು |
---|---|---|
12/5/2025 | ಸೋಮವಾರ | ಆಗಿ ಹುಣ್ಣಿಮೆ |
27/5/2025 | ಮಂಗಳವಾರ | ಬಾದಮಿ ಅಮವಾಸ್ಯೆ |
ವಿಶೇಷ ದಿನಗಳು
ದಿನಾಂಕ | ವಾರ | ವಿಶೇಷ ದಿನ |
---|---|---|
1/5/2025 | ಗುರುವಾರ | ಕಾರ್ಮಿಕರ ದಿನ |
12/5/2025 | ಸೋಮವಾರ | ಬುಧ್ದ ಪೂರ್ಣಿಮಾ |
16/5/2025 | ಶುಕ್ರವಾರ | ಸಂಕಷ್ಟ ಚತುರ್ಥಿ |
ಸರ್ಕಾರಿ ರಜಾ ದಿನಗಳು
ದಿನಾಂಕ | ವಾರ | ವಿಷಯ |
---|---|---|
1/5/2025 | ಗುರುವಾರ | ಕಾರ್ಮಿಕರ ದಿನ |
12/5/2025 | ಸೋಮವಾರ | ಬುಧ್ದ ಪೂರ್ಣಿಮಾ |
ಬ್ಯಾಂಕ್ ರಜಾ ದಿನಗಳು
ದಿನಾಂಕ | ವಾರ | ರಜೆಯ ಕಾರಣ |
---|---|---|
10/5/2025 | ಶನಿವಾರ | 2 ನೇ ಶನಿವಾರ |
24/5/2025 | ಶನಿವಾರ | 4 ನೇ ಶನಿವಾರ |
ಈ ತಿಂಗಳ ರಾಶಿ ಫಲ
1. ಮೇಷ ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ಹೆಚ್ಚು ಪ್ರಸಿದ್ದಿ ಸಿಗುತ್ತದೆ. ಪಿತ್ತದ ತೊಂದರೆ, ಒಮ್ಮೆಲೆ ಸಿಟ್ಟು ಬರುವುದು. ಕಂಕಣ ಬಲ ಕೂಡಿ ಬರುವುದು. ವಿದ್ಯೆಯ ಸಂಗಡ ವ್ಯಾಸಂಗ ಹೆಚ್ಚುವುದು. ಸ್ವಾಭಿಮಾನಿ ಆಗಿರುವಿರಿ. ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ.
2. ವೃಷಭ ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ಕೃಷಿಯಲ್ಲಿ ಹೂಡಿಕೆ. ದೊಡ್ಡ ಮೊತ್ತದ ವೆಚ್ಚ ಸಾಧ್ಯತೆ, ಉತ್ತರಾರ್ಧದಲ್ಲಿ ಪಿತ್ತದ ತೊಂದರೆ, ವಾರಸಾ ಹಕ್ಕಿನಿಂದ ಲಾಭ ಸಂಭವ, ಚಿನ್ನಾಭರಣ ಕೊಳ್ಳುವಿರಿ, ನೌಕರಿ ಕಾಯಮ್ಮಾಗುತ್ತದೆ. ವಾಹನ ಸುಖದ ಪಯಣ.
3. ವಿಥುನ ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ದೊಡ್ಡ ಮೊತ್ತದ ಆರ್ಥಿಕ ಲಾಭ ಆಗುವುದು. ಬಕ್ಷೀಸುಗಳು ಸಿಗುವವು. ಉತ್ತರಾರ್ಧದಲ್ಲಿ ಖರ್ಚು ಬೆಳೆಯುವವು. ಉದ್ಯೋಗದಲ್ಲಿ ಸ್ಪರ್ಧೆ ಹೆಚ್ಚಾಗುತ್ತದೆ. ಸಾಮಾಜಿಕ ಕಾರ್ಯದಿಂದ ಲಾಭ, ಕೌಟುಂಬಿಕ ಖರ್ಚು ಹೆಚ್ಚಾಗುತ್ತದೆ.
4. ಕರ್ಕ ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ಕೆಲಸದಲ್ಲಿ ಅಧಿಕಾರ ಹೆಚ್ಚುವುದು. ಜಾಣತನದಿಂದ ಲಾಭ, ವಿದೇಶ ಪ್ರವಾಸ, ಕಾನೂನು ವಿಷಯದ ಕಡೆ ಗಮನವಿರಲಿ. ಗಂಡಾಂತರದ ಕೆಲಸಗಳನ್ನು ಜಾಗರೂಕತೆಯಿಂದ ಮಾಡಿರಿ. ಪಿತ್ತದ ತೊಂದರೆ ಆಗುವುದು. ವಾಹನ ಸುಖದ ಪಯಣ.
5. ಸಿಂಹ ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ಸಾಮಾಜಿಕ, ಧಾರ್ಮಿಕ, ಪುಣ್ಯದ ಕಾಯಕ ಮಾಡುವಿರಿ. ಉತ್ತರಾರ್ಧದಲ್ಲಿ ಬಡ್ತಿ ಹೊಂದುವ ಸಾಧ್ಯತೆ. ಶಿಕ್ಷಣದಲ್ಲಿ ಮುಂದೆ ಹೋಗುತ್ತೀರಿ. ಲಾಭ ಆಗುವುದು, ಭಾವನೆಗಳ ಆವೇಗವನ್ನು ನಿಯಂತ್ರಿಸಿರಿ. ಕೃಷಿಯ ಕೆಲಸಗಳು ಆಗುತ್ತವೆ
6. ಕನ್ಯಾ ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ಉತ್ತರಾರ್ಧದಲ್ಲಿ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಪಾಪ – ಪುಣ್ಯಗಳ ಬಗ್ಗೆ ಯೋಚಿಸಿರಿ. ಕೆಲಸದ ಗುಣಮಟ್ಟ ಹೆಚ್ಚಿಸಿರಿ, ಹೂಡಿಕೆ ಮಾಡುವಿರಿ, ಪ್ರಾಪಟ್ರಿಯ ಕೆಲಸಗಳು ಆಗುವವು.
7. ತುಲಾ ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ಪ್ರವಾಸ ಸಾಧ್ಯತೆ, ಅಹಮ್ಮಿಕೆ ಇರುವುದು. ಉತ್ತರಾರ್ಧದಲ್ಲಿ ಮಂದಿ ಇದೆ. ಚಾಣಾಕ್ಷತನದಿಂದ ಕೆಲಸಗಳಾಗುವವು. ಕಂಕಣ ಬಲ ಕೂಡಿ ಬರುವುದು. ಕರ್ತವ್ಯದಲ್ಲಿ ಕೊರತೆ ಆಗುವುದು. ಮಕ್ಕಳಿಗೆ ತೊಂದರೆ. ಸಾಮಾಜಿಕ ಕಾರ್ಯದಲ್ಲಿ ಭಾಗಿ.
8. ವೃಶ್ಚಿಕ ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ಅವಕಾಶ ಮನೆ ಬಾಗಿಲಿಗೆ ಬರುವುದು. ಉತ್ತರಾರ್ಧದಲ್ಲಿ ಪ್ರವಾಸ ಸಾಧ್ಯತೆ, ಭಾವನೆಗಳನ್ನು ಅದುಮಿಡಿರಿ. ದೈಹಿಕ ವಿಷಯದಲ್ಲಿ ಗಮನವಿರಲಿ, ಪ್ರಾಪರ್ಟಿಯ ಕೆಲಸಗಳಾಗುವವು. ಕಲೆ-ಕ್ರೀಡೆಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಿರಿ.
9. ಧನು ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ಶಿಕ್ಷಣಕ್ಕೆ ದೈವದ ಬೆಂಬಲ ಸಿಗುತ್ತದೆ. ಉತ್ತರಾರ್ಧದಲ್ಲಿ ಚಾಣಾಕ್ಷತೆಯ ಮೂಲಕ ಲಾಭ, ಕಂಕಣ ಬಲ ಕೂಡಿ ಬರುವುದು. ಬಹುಮಾನಗಳು ಸಿಗುತ್ತವೆ. ಸೋದರ ಸೋದರಿಯರ ಸಂಗಡ ಕಲಹ ಬೇಡ. ಕಿವಿ ನೋವು ಕಾಣಿಸುತ್ತದೆ.
10. ಮಕರ ರಾಶಿ
ಈ ರಾಶಿಯವರಿಗೆ ಮೇ ತಿಂಗಳಲ್ಲಿ ಪ್ರಾಪಂಚಿಕ ಕಾಳಜಿ ತೆಗೆದುಕೊಳ್ಳುವಿರಿ. ಉತ್ತರಾರ್ಧದಲ್ಲಿ ಮನಸ್ಸಿನ ತೊಳಲಾಟ, ಕಲೆ – ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿರುವಿರಿ. ಆರ್ಥಿಕ ಲಾಭ ಆಗುವುದು. ಕೌಟುಂಬಿಕ ಮತ್ತು ಸಮಸ್ಯೆಗಳು ಹೆಚ್ಚಾಗುತ್ತದೆ. ವಾಹನ ಸುಖದ ಪ್ರವಾಸ
11. ಕುಂಭ ರಾಶಿ
ಈ ರಾಶಿಯವರಿಗೆ ಮೇ ತಿಂಗಳಿನಲ್ಲಿ ನಿರ್ಲಕ್ಷ್ಯ ಆಗಿರಬೇಡಿರಿ. ಭಾವನೆಗಳ ಆವೇಗವನ್ನು ನಿಯಂತ್ರಿಸಿರಿ. ಶೈಕ್ಷಣಿಕ ಪ್ರಗತಿ ಆಗುತ್ತಲೇ ಇರುತ್ತದೆ. ಪ್ರಗತಿಗಾಗಿ ಹೊಸ ಉಪಾಯ ಯೋಜನೆಗಳನ್ನು ಹಮ್ಮುವಿರಿ. ಯಶಸ್ಸು ಸಿಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡಿ
12. ಮೀನ ರಾಶಿ
ಈ ರಾಶಿಯವರಿಗೆ ಮೇ ತಿಂಗಳಿನಲ್ಲಿ ಆರ್ಥಿಕ ಪ್ರಗತಿ ಸಾಧಾರಣ, ಉತ್ತರಾರ್ಧದಲ್ಲಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಎಲ್ಲಾ ವಿಷಯಗಳ ಬಗ್ಗೆ ಎಚ್ಚರವಿರಲಿ. ವಿದೇಶ ಪ್ರವಾಸ ಸಾಧ್ಯತೆ. ಕಂಕಣ ಬಲ ಕೂಡಿ ಬರುತ್ತದೆ. ಭಾವಾವೇಶವನ್ನು ತಡೆಯಿರಿ.
ಮಳೆ ಭವಿಷ್ಯ
ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಖಾಂತರ ನೀವು 2025 ರ ಮಳೆಗಾಲದ ಮಳೆಯ ಹೆಸರು ಮತ್ತು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆ ಯಾವುವು? ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ
1. ಕೃತಿಕ ಮಳೆ
ಈ ಕೃತಿಕ ಮಳೆಯು ದಿನಾಂಕ 11/5/2025 ರಂದು ಸಾಯಂಕಾಲ 4.44 ಕ್ಕೆ ಶುರುವಾಗುತ್ತದೆ. ಈ ಮಳೆಯು ಭರ್ಜರಿ ಜೋರಾಗಿ ಬೀಳುವ ಸಂಭವವಿದೆ. ಹಾಗೆ ಈ ಮಳೆಯು 25/5/2025ರಂದು ಮುಕ್ತಾಯಗೊಳ್ಳುತ್ತದೆ.
2. ರೋಹಿಣಿ ಮಳೆ
ಈ ಮಳೆಯು ದಿನಾಂಕ 25/5/2025 ರಂದು ಮಧ್ಯಾಹ್ನ 1.26 ಕ್ಕೆ ಆರಂಭವಾಗುತ್ತದೆ ಹಾಗೆ ಈ ಮಳೆಯು ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ.
ಗ್ರಹಣ ವಿಚಾರಗಳು
ನಮ್ಮ ಈ ಕನ್ನಡ ಕ್ಯಾಲೆಂಡರ್ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ
ಗ್ರಹಣದ ಹೆಸರು | ದಿನಾಂಕ | ವಾರ | ಗ್ರಹಣ ಆರಂಭ ಕಾಲ | ಗ್ರಹಣ ಮೋಕ್ಷ ಕಾಲ |
---|---|---|---|---|
ಚಂದ್ರ ಗ್ರಹಣ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ |
ಸೂರ್ಯ ಗ್ರಹಣ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ |