ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ತಿಂಗಳು ಅತ್ಯಂತ ವಿಶೇಷವಾಗಿದ್ದು ಈ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 30 ದಿನಗಳಿದ್ದು ಹಾಗೆ 4 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಶ್ರೀರಾಮನವಮಿ, ಡಾ. ಅಂಬೇಡ್ಕರ್ ಜಯಂತಿ ಹಾಗೂ ಬಸವ ಜಯಂತಿ ಬರಲಿವೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಕೆಳಗಿನ ಲೇಖನವನ್ನು ಪೂರ್ತಿಯಾಗಿ ಓದಿ.

2025 ಏಪ್ರಿಲ್ ನಲ್ಲಿ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.
ಏಪ್ರಿಲ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ
ನಮ್ಮ ಈ ಕನ್ನಡ ಕ್ಯಾಲೆಂಡರ್ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ
ವಾರದ ಹೆಸರು | ರಾಹು ಕಾಲ | ಗುಳಿ ಕಾಲ | ಯಮಗಂಡ ಕಾಲ |
---|---|---|---|
ಭಾನುವಾರ | 04.30 – 06.00 | 12.00 – 01.30 | 03.00 – 04.30 |
ಸೋಮವಾರ | 07.30 – 09.00 | 10.30 – 12.00 | 10.30 – 03.00 |
ಮಂಗಳವಾರ | 03.00 – 04.30 | 09.00 – 10.30 | 12.00 – 01.30 |
ಬುಧವಾರ | 12.00 – 01.30 | 07.30 – 09.00 | 10.30 – 12.00 |
ಗುರುವಾರ | 01.30 – 03.00 | 06.00 – 07.30 | 09.00 – 10.30 |
ಶುಕ್ರವಾರ | 10.30 – 12.00 | 03.00 – 04.30 | 07.30 – 09.00 |
ಶನಿವಾರ | 09.00 – 10.30 | 01.30 – 03.00 | 06.00 – 07.30 |
ಶುಭ ಕಾರ್ಯಗಳಿಗೆ ಉತ್ತಮ ದಿನಗಳು
ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಂಖಾಂತರ ತಿಳಿಯಬಹುದಾಗಿದೆ
ತಿಂಗಳು | ಶುಭ ಮುಹೂರ್ತದ ಹೆಸರು | ದಿನಾಂಕ |
---|---|---|
ಏಪ್ರಿಲ್ | ವಿವಾಹ ಮುಹೂರ್ತಗಳು | 14, 18, 19, 20, 21, 22, 25, 30 |
ಏಪ್ರಿಲ್ | ವಾಸ್ತು ಶಾಂತಿ ಮುಹೂರ್ತಗಳು | 30 |
ಏಪ್ರಿಲ್ | ಉಪನಯನ ಮುಹೂರ್ತಗಳು | 2, 7 |
ಏಪ್ರಿಲ್ | ಶುಭ ದಿನ | 2, 5, 6, 7, 9, 10, 11, 14, 20, 21, 22, 24, 28, 30 |
ಏಪ್ರಿಲ್ | ಮಧ್ಯಮ ದಿನ | 1, 8, 23, 25, 29 |
ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ
ದಿನಾಂಕ | ವಾರ | ಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು |
---|---|---|
12/4/2025 | ಶನಿವಾರ | ದವನದ ಹುಣ್ಣಿಮೆ |
27/4/2025 | ಭಾನುವಾರ | ಅಕ್ಷತ್ತದಿಗೆ ಅಮವಾಸ್ಯೆ |
ವಿಶೇಷ ದಿನಗಳು
ದಿನಾಂಕ | ವಾರ | ವಿಶೇಷ ದಿನ |
---|---|---|
6/4/2025 | ಭಾನುವಾರ | ರಾಮನವಮಿ |
10/4/2025 | ಗುರುವಾರ | ಮಹಾವೀರ ಜಯಂತಿ |
12/4/2025 | ಶನಿವಾರ | ಹನುಮ ಜಯಂತಿ |
14/4/2025 | ಸೋಮವಾರ | ಅಂಬೇಡ್ಕರ್ ಜಯಂತಿ |
16/4/2025 | ಬುಧವಾರ | ಸಂಕಷ್ಟ ಚತುರ್ಥಿ |
18/4/2025 | ಶುಕ್ರವಾರ | ಗುಡ್ ಫ್ರೈಡೆ |
30/4/2025 | ಬುಧವಾರ | ಅಕ್ಷಯ ತೃತೀಯಾ, ಬಸವೇಶ್ವರ ಜಯಂತಿ |
ಸರ್ಕಾರಿ ರಜಾ ದಿನಗಳು
ದಿನಾಂಕ | ವಾರ | ವಿಷಯ |
---|---|---|
10/4/2025 | ಗುರುವಾರ | ಮಹಾವೀರ ಜಯಂತಿ |
14/4/2025 | ಸೋಮವಾರ | ಅಂಬೇಡ್ಕರ್ ಜಯಂತಿ |
18/4/2025 | ಶುಕ್ರವಾರ | ಗುಡ್ ಫ್ರೈಡೆ |
30/4/2025 | ಬುಧವಾರ | ಅಕ್ಷಯ ತೃತೀಯಾ, ಬಸವೇಶ್ವರ ಜಯಂತಿ |
ಬ್ಯಾಂಕ್ ರಜಾ ದಿನಗಳು
ದಿನಾಂಕ | ವಾರ | ರಜೆಯ ಕಾರಣ |
---|---|---|
12/4/2025 | ಶನಿವಾರ | 2 ನೇ ಶನಿವಾರ |
26/4/2025 | ಶನಿವಾರ | 4 ನೇ ಶನಿವಾರ |
ಈ ತಿಂಗಳ ರಾಶಿ ಫಲ
- ಮೇಷ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಪೂರ್ವಾರ್ಧದಲ್ಲಿ ಅನೇಕ ಖರ್ಚುಗಳು ಹಾಗೆಯೇ ಕಾನೂನು ವಿಚಾರಗಳನ್ನು ಎದುರಿಸಬೇಕಾಗುತ್ತದೆ. ಉತ್ತರಾರ್ಧದಲ್ಲಿ ಸ್ವಾಭಿಮಾನ ಜಾಗರೂಕ ಆಗುವುದು. ಪ್ರಾಪರ್ಟಿಯ ಕೆಲಸಗಳಾಗುವವು. ಕಂಕಣ ಬಲ ಕೂಡಿ ಬರುತ್ತದೆ.
2. ವೃಷಭ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಅನೇಕ ಮಾರ್ಗಗಳಿಂದ ಆರ್ಥಿಕ ಲಾಭ ಸಂಭವ, ಗೆಳೆಯರಿಗಾಗಿ ಖರ್ಚು ಮಾಡುವಿರಿ. ಚಿನ್ನಾಭರಣ ಪ್ರಾಪ್ತಿ ಆಗುತ್ತದೆ. ಕೃಷಿ ಮತ್ತು ಪ್ರಾಪರ್ಟಿಯಲ್ಲಿ ಹೂಡಿಕೆ, ವಿದೇಶ ಪ್ರವಾಸ, ಆರೋಗ್ಯ ಸಂಭಾಳಿಸಿರಿ. ನಿಷ್ಕಾರಣ ಕಲಹದಿಂದ ದೂರವಿರಿ.
3. ವಿಥುನ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಉದ್ಯೋಗ – ನೌಕರಿಯಲ್ಲಿ ದೊಡ್ಡದಾಗಿ ಆಚೆ ಈಚೆ ಆಗುವುದು, ಚಾಣಾಕ್ಷತನ, ಮುತ್ಸದ್ಧಿತನ ಬಳಸಿರಿ. ಉತ್ತರಾರ್ಧದಲ್ಲಿ ಆರ್ಥಿಕ ಲಾಭ ಅಧಿಕ, ವಿದೇಶ ಪ್ರವಾಸ ಸಾಧ್ಯತೆ. ಪ್ರತಿಕೂಲ ಪ್ರಸಂಗದಿಂದ ಲಾಭ, ಕೋಪವನ್ನು ಹಿಡಿದಿಟ್ಟುಕೊಳ್ಳಿ.
4. ಕರ್ಕ ರಾಶಿ
ಈ ರಾಶಿಯವರು ಏಪ್ರಿಲ್ ತಿಂಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ಭಾಗಿ ಅಗುವಿರಿ. ಉತ್ತರಾರ್ಧದಲ್ಲಿ ಅಧಿಕಾರವು ಹೆಚ್ಚಾಗುವುದು. ಕಂಕಣ ಬಲ ಕೂಡಿ ಬರುತ್ತದೆ. ಆರ್ಥಿಕ ಗಳಿಕೆ ಸಾಧ್ಯ. ವಿದೇಶಿ ಪ್ರವಾಸ, ಪ್ರವಾಸಗಳು ಜರುಗುವವು. ಗುಪ್ತ ಶತ್ರುಗಳು ಇರುವ ಸಾಧ್ಯತೆ.
5. ಸಿಂಹ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಪ್ರತಿಕೂಲ ಪ್ರಸಂಗದಿಂದ ಆರ್ಥಿಕ ಲಾಭ. ಪೂರ್ವಾರ್ಧದಲ್ಲಿ ಖರ್ಚು ಕೈ ಮೀರುವುದು. ಉದ್ಯೋಗದಲ್ಲಿ ಮಂದಿ ಇರುವುದು. ಕ್ರೋಧ ಹಿಡಿತದಲ್ಲಿರಲಿ ಕಂಕಣ ಬಲ ಕೂಡಿ ಬರುವುದು.
6. ಕನ್ಯಾ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ತಪ್ಪು ಗ್ರಹಿಕೆ, ತಂದೆ – ತಾಯಿಯರಿಗೆ ಕಾಯಿಲೆ, ಅಹಂಕಾರ, ಹಠದಿಂದ ಕೆಲವು ತೊಂದರೆ ಉಂಟಾಗುತ್ತದೆ. ಉತ್ತರಾರ್ಧದಲ್ಲಿ ಮಂದಿ ಆಗುತ್ತದೆ. ಪ್ರಾಪರ್ಟಿಯ ಕೆಲಸಗಳು ಆಗುತ್ತದೆ. ಗುರು ಕೃಪೆ ನಿಮ್ಮ ಮೇಲಿದೆ.
7. ತುಲಾ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಸಂಘರ್ಷ ಹೆಚ್ಚಾಗುತ್ತದೆ. ಪ್ರತಿಕಾರ ಶಕ್ತಿ ಹೆಚ್ಚಾಗುತ್ತದೆ. ಉತ್ತರಾರ್ಧದಲ್ಲಿ ಕಾರ್ಯ ನಿಮಿತ್ತ ಪ್ರವಾಸ ಸಾಧ್ಯತೆ. ಪ್ರಯತ್ನಗಳು ಕಡಿಮೆ ಬೀಳುವ ಸಾಧ್ಯತೆ. ಸಿಟ್ಟನ್ನು ತಡೆಯಿರಿ ಹಾಗೆಯೇ ಪ್ರತಿಕೂಲ ಪ್ರಸಂಗದಿಂದ ಲಾಭ ಸಂಭವ.
8. ವೃಶ್ಚಿಕ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಬೌದ್ಧಿಕತೆ, ಕಲೆ, ಲೇಖನ, ಕಂಪ್ಯೂಟರ್ ಕ್ಷೇತ್ರದಲ್ಲಿ ಪ್ರಗತಿ ಆಗುವುದು ಆದರೆ ಮನದ ತೊಳಲಾಟ ಆಗುತ್ತದೆ. ಹೆಸರಿವಾಸಿ ಆಗುವಿರಿ, ಪರೋಪಕಾರಿ ಆಗುವಿರಿ. ಕೃಷಿಯಲ್ಲಿ ಹೂಡಿಕೆ, ಕಂಕಣ ಬಲ ಕೂಡಿ ಬರುವುದು.
9. ಧನು ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಪ್ರಾಪಂಚಿಕ, ಒಕ್ಕಲುತನ, ವಾಹನ, ಪಶುಧನದ ಕೆಲಸಗಳು ಸಿಗುವವು. ಉತ್ತರಾರ್ಧದಲ್ಲಿ ತರಬೇತಿಗೆ ದೈವದ ಬೆಂಬಲ ಸಿಗುವುದು. ಸಮಾರಂಭ ಸುಖಾಂತ್ಯವಾಗುವುವು. ಕೌಟುಂಬಿಕ ಸುಖ ಮನಸ್ಸಿನಂತಿಲ್ಲ.
10. ಮಕರ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಪ್ರಯತ್ನಶೀಲರಾಗಿರುವಿರಿ, ಹೆಚ್ಚು ಹೆಸರುವಾಸಿ ಆಗುತ್ತೀರಿ, ಆರ್ಥಿಕ ಲಾಭ ಆಗಬಹುದು. ಉತ್ತರಾರ್ಧದಲ್ಲಿ ಪ್ರಾಪಂಚಿಕ ಕಾಳಜಿ ಇರುತ್ತದೆ. ಕೌಟುಂಬಿಕ ಖರ್ಚು ಅಧಿಕ. ಕಂಕಣ ಬಲ ಕೂಡಿ ಬರುವುದು, ಸಂತಾನ ಪ್ರಾಪ್ತಿ ಆಗುವುದು.
11. ಕುಂಭ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಕುಟುಂಬದಲ್ಲಿ ಅಶಾಂತಿ, ಆರ್ಥಿಕ ಲಾಭ ಸಂಭವ, ಅಭಿವೃದ್ದಿಗಾಗಿ ಹೊಸ ಉಪಾಯ ಯೋಜನೆಗಳನ್ನು ರೂಪಿಸುವಿರಿ. ಆರೋಗ್ಯ ಸುಧಾರಿಸುತ್ತದೆ. ಅಂತಿಮ ಕೆಲಸದಲ್ಲಿ ಯಶಸ್ಸು, ಕಾನೂನು ವಿಷಯವನ್ನು ನಿಭಾಯಿಸಿರಿ
12. ಮೀನ ರಾಶಿ
ಈ ರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಪ್ರಯತ್ನವಾದಿ ಆಗಿರುವಿರಿ. ತಕ್ಷಣ ಸಿಟ್ಟು ಬರುತ್ತದೆ. ಪಿತ್ತದ ತೊಂದರೆ ಸಂಭವ. ಮಾನಸಿಕ ಸಂತುಲನ ಕಾಯ್ದುಕೊಳ್ಳಿರಿ. ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ ಆಗಿರುತ್ತದೆ. ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡುವಿರಿ.
ಮಳೆ ಭವಿಷ್ಯ
ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಖಾಂತರ ನೀವು 2025 ರ ಮಳೆಗಾಲದ ಮಳೆಯ ಹೆಸರು ಮತ್ತು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಏಪ್ರಿಲ್ ತಿಂಗಳಿನಲ್ಲಿ ಬರುವ ಮಳೆಯಾವುವು ಎಂದು ತಿಳಿಯಲು ಇಲ್ಲಿ ನೋಡಿ
ಅಶ್ವಿನಿ ಮಳೆ
ಈ ಅಶ್ವಿನಿ ಮಳೆಯು ದಿನಾಂಕ 13/4/2025 ರಂದು ಬೆಳಿಗ್ಗೆ 6.05 ಕ್ಕೆ ಆರಂಭವಾಗುತ್ತದೆ. ಈ ಮಳೆಯು ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಹಾಗೆ ಈ ಮಳೆಯು 27/4/2025 ರಂದು ಮುಕ್ತಾಯಗೊಳ್ಳುತ್ತದೆ
ಭರಣಿ ಮಳೆ
ಈ ಮಳೆಯು ದಿನಾಂಕ 27/04/2025 ರಂದು ರಾತ್ರಿ 9.45 ಕ್ಕೆ ಆರಂಭವಾಗುತ್ತದೆ ಹಾಗೆ ಈ ಮಳೆಯು ಅತ್ಯಲ್ಪ ಮಳೆಯನ್ನು ಸುರಿಸುವ ಸಾಧ್ಯತೆಯಿದೆ.
ಗ್ರಹಣ ವಿಚಾರಗಳು
ನಮ್ಮ ಈ ಕನ್ನಡ ಕ್ಯಾಲೆಂಡರ್ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ
ಗ್ರಹಣದ ಹೆಸರು | ದಿನಾಂಕ | ವಾರ | ಗ್ರಹಣ ಆರಂಭ ಕಾಲ | ಗ್ರಹಣ ಮೋಕ್ಷ ಕಾಲ |
---|---|---|---|---|
ಚಂದ್ರ ಗ್ರಹಣ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ |
ಸೂರ್ಯ ಗ್ರಹಣ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ | ಯಾವುದೇ ಗ್ರಹಣ ಇರುವುದಿಲ್ಲ |